ಮಡಿಕೇರಿ, ಮಾ. ೩೧: ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಮ್ಮತಾಟ್ ಜನಪದ ನೃತ್ಯ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿಮಾಚಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ನಾನು ಕಲಾವಿದರನ್ನು ಬೆಳೆಸಿ, ಈ ಜನಪದ ಕಲೆಯನ್ನು ಪ್ರಚಾರಪಡಿಸಿ ಉಳಿಸಲು ಶ್ರಮಪಟ್ಟಿದ್ದರ ಫಲವಾಗಿ ಪದ್ಮಶ್ರೀ ಲಭಿಸಿದೆ ಎಂದರು.
ಸಮಾಜದ ವತಿಯಿಂದ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ದಿನಾಚರಣೆಯ ಕುರಿತು ಪದ್ಮಾಕ್ಷಿಮೋಹನ್ ಮಾತನಾಡಿದರು.
ಇಂದ್ರಜಯರಾA, ನಂದಿನಿ ಗಣೇಶ್, ವಿದ್ಯಾ ದೇವರಾಜ್, ಸರೋಜ ರಾಜು, ಪೂರ್ಣಿಮಾ ಜಗದೀಶ್, ಮನೋನ್ಮಣಿ ಬಾಲರಾಜ್, ಲಕ್ಷಿö್ಮÃ ಮೋಹನ್, ಭಾರತಿ ಮಂಜುನಾಥ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಜಯಶ್ರೀ ಗವಿ ಪ್ರಾರ್ಥಿಸಿ, ಭಾರತಿ ಸುಬ್ರಮಣ್ಯ ಸ್ವಾಗತಿಸಿ, ನಿರ್ಮಲ ದಿವಾಕರ್ ವಂದಿಸಿದರು, ಶಶಿಕಲಾ ಲೋಕೇಶ್ ನಿರೂಪಿಸಿದರು.