ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ವ್ಯಾಪ್ತಿಯ ಹಲವು ಗ್ರಾಮಗಳ ಆರಾಧ್ಯ ದೈವ ಶ್ರೀ ನಂಜುAಡೇಶ್ವರ ದೇವರ ವಾರ್ಷಿಕ ಪೂಜೋತ್ಸವ ತಾ. ೩ ಮತ್ತು ೪ ರಂದು ನಡೆಯಲಿದೆ. ನಂಜರಾಯಪಟ್ಟಣದ ಪೂರ್ವ ದಿಕ್ಕಿನಲ್ಲಿ ಹರಿದಿರುವ ಕಾವೇರಿ ನದಿ ದಂಡೆಯಲ್ಲಿರುವ ಈ ದೇವಾಲಯದ ವಾರ್ಷಿಕ ಪೂಜೋತ್ಸವಗಳಲ್ಲಿ ಪ್ರತಿಬಾರಿ ಸುತ್ತಲಿನ ಐದಾರು ಗ್ರಾಮಗಳ ಸಹಸ್ರಾರು ಭಕ್ತ ಜನರು ಭಾಗಿಯಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ಪುನೀತರಾಗುತ್ತಾರೆ.
ತಾ. ೩ ರಂದು ಸಂಜೆ ೫ ಗಂಟೆಗೆ ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪೂಜಾ ವಿಧಿಗಳು ಆರಂಭವಾಗುತ್ತವೆ. ದೇವಾಲಯದ ಆವರಣದಲ್ಲಿನ ಕನ್ನಂಬಾಡಮ್ಮ ದೇವರ ಮುಖಸಿರಿಯನ್ನು ವಾದ್ಯ ಗೋಷ್ಠಿಯೊಂದಿಗೆ ದೇವಾಲಯ ಸಮಿತಿ ಅಧ್ಯಕ್ಷರೂ ಆದ ಗ್ರಾಮದ ಪಟೇಲ್ ಎನ್.ಕೆ. ಮೋಹನಕುಮಾರ್ ಅವರ ಮನೆಯಿಂದ ದೇವಸ್ಥಾನಕ್ಕೆ ತರಲಾಗುತ್ತದೆ.
ಸಂಜೆ ೭ ಗಂಟೆಗೆ ಶ್ರೀ ದೇವರುಗಳಿಗೆ ಅಲಂಕಾರ, ಗಂಗೆ ಗಣಪತಿ, ಅಗ್ರೋಧಕ ಪೂಜೆ, ಸ್ವಸ್ಥಿ ವಾಚನಂ, ಬಲಿ ಪೂಜೆ ನಡೆಯಲಿದೆ.
ರಾತ್ರಿ ೮.೩೦ಕ್ಕೆ ಮಹಾಮಂಗಳಾರತಿ, ರಾತ್ರಿ ೯ ಗಂಟೆಗೆ ಮಹಾಪ್ರಸಾದ ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯರಾತ್ರಿ ೧೨ ಗಂಟೆಯಿAದ ದೇವರುಗಳ ಉತ್ಸವ ಪಲ್ಲಕ್ಕಿ ಅಲಂಕಾರ ನಡೆಯಲಿದೆ. ತಾ. ೪ ರಂದು ಮುಂಜಾನೆ ೪ ಗಂಟೆಗೆ ಅಪ್ಪಾಜಿ ಸ್ವಾಮೀಜಿ ಸಮ್ಮುಖದಲ್ಲಿ ಕೆಂಡಕೊAಡದ ಪೂಜೆ ಹಾಗೂ ಮಹಾರುದ್ರಾಭಿಷೇಕ ನಡೆಯಲಿದೆ. ಬೆಳಿಗ್ಗೆ ೮ ಗಂಟೆಗೆ ವಾದ್ಯ ಮೇಳ, ಅಲಂಕೃತ ದೇವರುಗಳ ಪಲ್ಲಕ್ಕಿಯೊಂದಿಗೆ ಗಂಗಾ ಸ್ನಾನಕ್ಕೆ ಹೊರಡುವುದು, ೮.೩೦ ಕ್ಕೆ ಶ್ರೀ ದೇವರು ಗಳಿಗೆ ದುಬಾರೆಯ ಕಾವೇರಿ ನದಿಯಲ್ಲಿ ಗಂಗಾ ಸ್ನಾನ ಹಾಗೂ ಗಂಗಾ ಪೂಜೆ, ೯ ಗಂಟೆಗೆ ನಾಗಮಂಗಲದ ಮಹದೇವಪ್ಪ ತಂಡದಿAದ ವೀರಭದ್ರ ನೃತ್ಯದೊಂದಿಗೆ ದೇವರನ್ನು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಮೆರವಣಿಗೆ ಮೂಲಕ ದೇವಾಲಯದ ಸನ್ನಿಧಿಗೆ ತರಲಾಗುತ್ತದೆ. ೧೧.೩೦ಕ್ಕೆ ಅರಸೀಕೆರೆಯ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹಾಗೂ ವೀರಾಜಪೇಟೆಯ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದಿಂಡಗಾಡು ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕೆಂಡ ಕೊಂಡದ ಅಗ್ನಿ ಪೂಜೆ ನಡೆಯಲಿದೆ. ಬಳಿಕ ಮಹಾಮಂಗಳಾರತಿ ಹಾಗೂ ನೆರೆದ ಭಕ್ತರಿಗೆ ಮಹಾ ಪ್ರಸಾದ ಹಾಗೂ ಅನ್ನಸಂತರ್ಪಣೆ ಇರುತ್ತದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಕೆ. ಮೋಹನಕುಮಾರ್, ಕಾರ್ಯದರ್ಶಿ ಕೆ. ವಿ. ಪ್ರೇಮಾನಂದ ತಿಳಿಸಿದ್ದಾರೆ.
ದೇವಾಲಯದ ಇತಿಹಾಸ: ಹಾಲೇರಿ ಅರಸರ ಕಾಲದಲ್ಲಿ ೧೬ ಅಥವಾ ೧೭ನೇ ಶತಮಾನದಲ್ಲಿ ನಿರ್ಮಿತವಾಗಿದೆ ಎನ್ನಲಾದ ಈ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ.
ಪಿರಿಯಾಪಟ್ಟಣದ ಅರಸು ನಂಜರಾಜ (ನಂಜುAಡ ಅರಸು) ಹಾಗೂ ಮೈಸೂರು ಅರಸರ ನಡುವೆ ನಡೆದ ಕಾಳಗದಲ್ಲಿ ಮೈಸೂರು ಅರಸರ ಆಕ್ರಮಣಕ್ಕೀಡಾಗಿ ನಂಜುAಡರಾಜ ತನ್ನ ರಾಜ್ಯ ಹಾಗೂ ಪುತ್ರನನ್ನು ಕಳೆದುಕೊಂಡು ನಂಜರಾಯಪಟ್ಟಣದ ದೊಡ್ಡವೀರಪ್ಪ ಒಡೆಯನಲ್ಲಿಗೆ ಆಸರೆ ಬೇಡಿ ಬರುತ್ತಾರೆ. ನಂಜುAಡ ಅರಸು ಕೋರಿಕೆಯಂತೆ ನಂಜರಾಯಪಟ್ಟಣ ದಲ್ಲಿ ಅರಮನೆ ಹಾಗೂ ನಂಜುAಡೇಶ್ವರ ದೇವಾಲಯವನ್ನು ಕಟ್ಟಲಾಗುತ್ತದೆ. ಮೈಸೂರು ಅರಸರಿಗೆ ಪಿರಿಯಾಪಟ್ಟಣದ ನಂಜರಾಜ ಅರಸನ ಮಗಳನ್ನು ಮದುವೆ ಮಾಡಿಕೊಳ್ಳುವ ಹಂಬಲ ಇರುತ್ತದೆ. ಆದರೆ, ಕುಲಾಚಾರ ಹಾಗೂ ಸಂಬAಧಗಳ ಪರಂಪರೆ ಈ ಎರಡೂ ಅರಸು ವಂಶಗಳ ನಡುವೆ ನಡೆದು ಬಾರದಿದ್ದ ಕಾರಣ ನಂಜರಾಜ ಅರಸು ಈ ಮದುವೆ ಪ್ರಸ್ತಾಪವನ್ನು ತಿರಸ್ಕರಿಸು ತ್ತಾನೆ. ಇದರಿಂದ ಮೈಸೂರು ಅರಸನಿಗೆ ಅವಮಾನವಾಗುತ್ತದೆ. ಬಳಿಕ ಈತ ನಂಜುAಡರಾಜನ ವಿರುದ್ಧ ಜಿದ್ದಿಗೆ ಇಳಿದು ಯುದ್ಧ ಸಾರುತ್ತಾನೆ. ಹುಣಸೂರಿನ ಚಿಲಕುಂದದ ಬಳಿ ನಡೆದ ಯುದ್ಧದಲ್ಲಿ ಮೈಸೂರು ಅರಸನ ಸೈನ್ಯ ಸೋಲುತ್ತದೆ. ಇದರಿಂದ ಮತ್ತಷ್ಟು ಹತಾಶನಾದ ಮೈಸೂರು ಅರಸ, ಮತ್ತಷ್ಟು ಹೆಚ್ಚಿನ ಸೈನ್ಯದೊಂದಿಗೆ ನಂಜುAಡರಾಜನ ಮೇಲೆ ಸಾರಿದ ಎರಡನೇ ಯುದ್ಧದಲ್ಲಿ ನಂಜರಾಜ ಅರಸುವಿನ ಮಗ ವೀರರಾಜ ಯುದ್ಧದಲ್ಲಿ ಅಸು ನೀಗುತ್ತಾನೆ. ಅದಕ್ಕೂ ಮೊದಲು ಯುದ್ಧಕ್ಕೆ ಹೊರಡುವ ಮುನ್ನ ರುಮಾಲು ಕೆಳಗೆ ಬಿದ್ದು ಅಪಶಕುನವಾಗುತ್ತದೆ. ತನ್ನ ಕುಟುಂಬದವರನ್ನೆಲ್ಲಾ ಕೊಂದು, ಅರಮನೆ ಬಾಗಿಲು ಹಾಕಿಸಿ, ತನ್ನ ವಂಶಜರು ಬಂದರೆ ಮಾತ್ರ ಬಾಗಿಲು ತೆರೆಯಿರಿ ಎಂದು ಹೇಳಿ ಹೋಗುತ್ತಾನೆ.
ಮೈಸೂರು ಅರಸರು ಬಂದು ಆನೆಗಳಿಂದ ಬಾಗಿಲುಗಳನ್ನು ದೂಡಿಸಿದರೂ ಕೂಡ ಬಾಗಿಲು ತೆರೆಯದಿದ್ದಾಗ ಸತ್ಯವಂತಿಕೆ ಇಲ್ಲಿದೆ ಎಂದು ನಂಜರಾಯಪಟ್ಟಣದ ಅರಮನೆಯ ಸೂರಿಗೆ ಹೋದರೆನ್ನಲಾಗಿದೆ. ಅಲ್ಲಿ ಸುದ್ದಿ ತಿಳಿದ ನಂಜರಾಜ ಅರಸ ಹಾಲೇರಿ ಅರಸನಲ್ಲಿಗೆ ತೆರಳಿ ಸೈನ್ಯ ಸಹಾಯ ಪಡೆದು ಬರುವಲ್ಲಿ ಅವನ ಹೆಂಡತಿ, ಮಗ ಹಾಗೂ ಮಗಳು ಶತ್ರುಗಳಿಂದ ತಪ್ಪಿಸಿಕೊಂಡು ನಂಜರಾಜ ಅರಸನನ್ನು ಸೇರಿಕೊಂಡರು. ಮೈಸೂರು ಅರಸರು ಲೂಟಿ ಮಾಡಿಕೊಂಡು ಹೋದ ಮೇಲೆ ಹಾಲೇರಿ ಅರಸರಲ್ಲಿ ನಂಜುAಡ ಅರಸು ಪ್ರಾರ್ಥಿಸಿ ತನ್ನ ಕೋರಿಕೆಗಳನ್ನು ಈಡೇರಿಸಿ ಕೊಂಡ ಎನ್ನಲಾಗಿದೆ. ಕೊಡಗು ಸಂಸ್ಥಾನವನ್ನಾಳಿದ ಹಾಲೇರಿ ವಂಶಸ್ಥರಾದ ಹಾಲೇರಿ ಅರಮನೆಯ ಸಿರಿಬಾಯಿ ದೊಡ್ಡವೀರಪ್ಪ ಒಡೆಯರ ಸಹೋದರ ರಾದ ನಂಜುAಡರಸು ತನ್ನ ರಾಣಿಯಾದ ನಂಜಮ್ಮಾಜಿ ಅವರೊಂದಿಗೆ ದೊಡ್ಡವೀರಪ್ಪ ಅವರಿಂದ ಕೆಲವು ಹಳ್ಳಿಗಳು, ಹೋಬಳಿಗಳನ್ನು ಪಡೆದು ಅರಮನೆ-ಕೋಟೆ ಕಟ್ಟಿಸಿಕೊಂಡು ಸಣ್ಣ-ಪುಟ್ಟ ರಾಜ್ಯ ಮಾಡಿಕೊಂಡು ರಾಜ್ಯಭಾರ ಮಾಡಿಕೊಂಡಿರುತ್ತಾರೆ. ನಂಜರಾಜ ಅರಸು ಅವರು ತಮ್ಮ ಮನೆ ದೇವರು ನಂಜನಗೂಡಿನ ನಂಜುAಡೇಶ್ವರ ಸನ್ನಿಧಿಯಿಂದ ಪ್ರತೀ ವಾರವು ತೀರ್ಥ ಪ್ರಸಾದಗಳನ್ನು ಅಂಚೆ ಮಾದರಿಯ ಲಕೋಟೆಯಲ್ಲಿ ತರಿಸಿಕೊಂಡು ಮನೆದೇವರನ್ನು ಪೂಜಿಸುವ ಪದ್ಧತಿ ಇರುತ್ತದೆ. ಈ ನಡುವೆ ಒಂದು ದಿನ ನಂಜರಾಜ ಅರಸನ ಕನಸಿನಲ್ಲಿ ಒಬ್ಬ ಜಂಗಮ ಬಂದು ನೀನು ತೀರ್ಥಪ್ರಸಾದ ಗಳನ್ನು ತರಿಸಬೇಡ. ಕಿಡಿಗೇಡಿಗಳು ಅದರಲ್ಲಿ ವಿಷಪ್ರಾಷನ ನೀಡಿ ನಿನ್ನನ್ನು ಕೊಲ್ಲುವ ಸಂಚು ರೂಪಿಸುತ್ತಾರೆ. ಆದ್ದರಿಂದ ನೀನೇ ಒಂದು ನಂಜುAಡೇಶ್ವರ ದೇವಾಲಯವನ್ನು ಕಟ್ಟಿಸು ಎಂದು ಹೇಳಿ ಆ ಜಂಗಮ ಹೊರಟು ಹೋಗುತ್ತಾನೆ.
ಈ ವಿಷಯವನ್ನು ತನ್ನ ಸೋದರ ಹಾಲೇರಿ ಅರಸನಿಗೆ ತಿಳಿಸಲಾಗಿ ಮುದ್ದು ರಾಜ ಒಡೆಯರು ತಮ್ಮ ಆಸೆಯಂತೆ ನಂಜರಾಯಪಟ್ಟಣದ ಅರಮನೆಯ ದಕ್ಷಿಣದ ದಿಕ್ಕಿನ ಕಾವೇರಿ ನದಿ ತೀರದಲ್ಲಿ ನಂಜುAಡೇಶ್ವರ ದೇವಾಲಯವನ್ನು ಕಲ್ಲಿನಿಂದ ಕಟ್ಟಿಸಿ ಲಿಂಗಪ್ರತಿಷ್ಠೆ ಮಾಡಲಾಗುತ್ತದೆ. ಬಳಿಕ ಇದಕ್ಕೆ ನಿತ್ಯವೂ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತದೆ. ನಂತರ ಮೈಸೂರು ಅರಸರ ಧಾಳಿಯಿಂದ ಪಿರಿಯಾಪಟ್ಟಣ ಹಾಗೂ ನಂಜರಾಜಪಟ್ಟಣ ಎರಡೂ ಅರಮನೆಗಳು ನಾಶ ಹೊಂದಿ ಲೂಟಿಯಾದುದನ್ನು ತಿಳಿದ ನಂಜರಾಜ ಅರಸ ತನ್ನ ಸಹೋದರ ಸಿರಿಬಾಯಿ ದೊಡ್ಡ ವೀರಪ್ಪನಲ್ಲಿ ವಿನಂತಿಸಿ, ಮೈಸೂರು ಅರಸರ ಧಾಳಿಯಿಂದ ಪುತ್ರ, ಅರಮನೆ ಹಾಗೂ ರಾಜ್ಯವನ್ನು ಕಳೆದುಕೊಂಡ ದೈವಾದೀನವಾದ ಬಳಿಕ ಆತನ ಮೃತದೇಹವನ್ನು ನಂಜುAಡೇಶ್ವರ ದೇವಾಲಯದ ಮುಂಬದಿಯ ಗೋಡೆಯ ಬಳಿ ಸಮಾಧಿ ನಿರ್ಮಿಸಿ ಗದ್ದುಗೆ ಮಾಡಲಾಗಿದೆ. ಅದರ ಮೇಲೆ ಬಸವನನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಕೊಡಗು ಗೆಜೆಟಿಯರ್‌ನಲ್ಲಿ ಉಲ್ಲೇಖವಿದೆ. ಒಟ್ಟಾರೆ ನಂಜರಾಯ ಪಟ್ಟಣದ ಶ್ರೀ ನಂಜುAಡೇಶ್ವರ ದೇವರ ಸನ್ನಿಧಿ ಕುಶಾಲನಗರ ತಾಲೂಕಿನ ಪ್ರಮುಖ ಶಿವ ದೇವಾಲಯವಾಗಿದೆ. ಈ ದೇವಾಲಯ ವನ್ನು ಕಳೆದ ಹಲವು ವರ್ಷಗಳ ಹಿಂದೆ ಸ್ಥಳೀಯ ಭಕ್ತ ಜನ ಮಂಡಳಿ ಶ್ರೀ ಕ್ಷೇತ್ರ ಧರ್ಮಸ್ಥಳದ ಆರ್ಥಿಕ ಸಹಕಾರ ಹಾಗೂ ಸ್ಥಳೀಯ ಭಕ್ತರ ಸಹಕಾರದೊಂದಿಗೆ ಹೊಸದಾಗಿ ಜೀರ್ಣೋದ್ಧಾರ ಮಾಡಲಾಗಿದೆ.
-ಕೆ. ಎಸ್. ಮೂರ್ತಿ, ಕುಶಾಲನಗರ.