ಮಡಿಕೇರಿ, ಮಾ. ೩೧ : ಜನರಲ್ ತಿಮ್ಮಯ್ಯ ಅವರ ಉತ್ತಮ ಸೇವೆಯಿಂದ ಅವರು ದೇಶಕಂಡ ಅತ್ಯುತ್ತಮ ಸೇನಾ ದಂಡ ನಾಯಕನಾಗಿದ್ದು, ಸೇನಾ ಕ್ಷೇತ್ರಕ್ಕೆ ಮಾದರಿ ಎನಿಸಿಕೊಂಡಿದ್ದಾರೆ ಎಂದು ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಹೇಳಿದರು.

ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ ೧೧೭ ನೇ ಹುಟ್ಟುಹಬ್ಬದ ದಿನವಾದ ಇಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಜನರಲ್ ತಿಮ್ಯಯ್ಯ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಶಿಸ್ತು, ದಕ್ಷತೆ, ಧೈರ್ಯ, ಸಾಹಸಕ್ಕೆ ಹೆಸರುವಾಸಿಯಾಗಿದ್ದ ತಿಮ್ಮಯ್ಯ ಅವರು ಸೇವೆಯಲ್ಲಿದ್ದಾಗ ತಿಮ್ಮಿ ಸಾಹೇಬ್ ಎಂದೇ ಪರಿಚಿತರಾಗಿದ್ದರು. ಅವರ ಕಾರ್ಯದಕ್ಷತೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದು ಅಭಿಪ್ರಾಯಿಸಿದರು. ಶಾಲೆಯಲ್ಲಿ ಜನರಲ್ ತಿಮ್ಮಯ್ಯ ಅವರ ಪುತ್ಥಳಿ ಅನಾವರಣವಾಗಿರುವುದು ಹೆಮ್ಮೆ ಎಂದರು. ತಿಮ್ಮಯ್ಯ ಅವರ ಸೇನಾ ಸಾಧನೆಯ ಬಗ್ಗೆ ವಿವರಿಸಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ನಾಮಫಲಕ ಉದ್ಘಾಟಿಸಿ, ಮಾತನಾಡಿ; ಜನರಲ್ ತಿಮ್ಮಯ್ಯ ಅವರ ಪುತ್ಥಳಿ ಪ್ರತಿಷ್ಠಾಪನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ. ಪುತ್ಥಳಿಯನ್ನು ನೋಡಿ ಮಕ್ಕಳಲ್ಲಿ ದೇಶಾಭಿಮಾನ, ಛಲ ಮೂಡಬೇಕು. ಈ ಹಿನ್ನೆಲೆಯಲ್ಲಿ ಪುತ್ಥಳಿ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು. ದಾನಿಗಳು ಮುಂದೆ ಬಂದರೆ ಬಡವಿದ್ಯಾರ್ಥಿಗಳ ಏಳಿಗೆಗೆ ಸಹಕಾರಿಯಾಗುವುದರ ಜೊತೆಗೆ ಶಾಲಾ ಅಭಿವೃದ್ಧಿ ಸಾಧ್ಯವಾಗಲಿದೆ. ಶಾಲೆಗೆ ಮೈದಾನದ ಕೊರತೆಯಿದ್ದು, ಮೈಸೂರು ರಸ್ತೆಯಲ್ಲಿರುವ ಸಮಾಜದ ಜಾಗವನ್ನು ಮೈದಾನಕ್ಕಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ವಿದ್ಯೆ ಕಲಿತ ಬಳಿಕ ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಡಿಪಾಗಿಡಬೇಕು. ಬಾಲಕಿಯರಿಗೂ ಸೇನೆಯಲ್ಲಿ ವಿಪುಲ ಅವಕಾಶಗಳಿರುವದಾಗಿ ಹೇಳಿದರು.

ಶಾಲಾ ಪ್ರಾಂಶುಪಾಲೆ ಕಲ್ಲ್ಮಾಡಂಡ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯಲ್ಲಿ ಜನರಲ್ ತಿಮ್ಮಯ್ಯ ಅವರ ಪುತ್ಥಳಿ ಸ್ಥಾಪನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಕಾರಣಕರ್ತರಾದ ಶಾಲಾ ಆಡಳಿತ ಮಂಡಳಿ, ದಾನಿಗಳು, ಶಾಲಾ ಸಿಬ್ಬಂದಿವರ್ಗ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭ ಅತಿಥಿಗಳು ನೂತನ ಕಚೇರಿ, ಶಾಲಾ ಕೊಠಡಿ, ವಾಚನಾಲಯ, ಒಳಾಂಗಣ ಕ್ರೀಡಾ ಕೊಠಡಿಯನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ನಂದಿನೆರವAಡ ಚೀಯಣ್ಣ, ಸಂಚಾಲಕಿ

(ಮೊದಲ ಪುಟದಿಂದ) ಕನ್ನಂಡ ಕವಿತ ಬೊಳ್ಳಪ್ಪ, ನಿರ್ದೇಶಕರುಗಳಾದ ನಂದಿನೆರವAಡ ದಿನೇಶ್, ಕನ್ನಂಡ ಸಂಪತ್, ಬೊಪ್ಪಂಡ ಸರಳಾ ಕರುಂಬಯ್ಯ, ಕಾಂಡೇರ ಲಲ್ಲುಕುಟ್ಟಪ್ಪ, ಮುಕ್ಕಾಟಿರ ಪೊನ್ನಮ್ಮ, ಮೂವೆರ ಜಯರಾಂ, ಚೊಟ್ಟೆಯಂಡ ಸಂಜು ಕಾವೇರಪ್ಪ, ಕಾಳಚಂಡ ಅಪ್ಪಣ್ಣ, ಮಂಡಿರ ಸದಾಮುದ್ದಪ್ಪ, ಪುತ್ತರಿರ ಕಾಳಯ್ಯ, ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಾಜಿ ಅಧ್ಯಕ್ಷ ಮೂವೆರ ಸುಬ್ಬಯ್ಯ, ಮಾಜಿ ಕಾರ್ಯಾಧ್ಯಕ್ಷ ಚೋವಂಡ ಕಾಳಪ್ಪ ಉಪಸ್ಥಿತರಿದ್ದರು.

ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲಾ ವಿದ್ಯಾರ್ಥಿ ಗಳು ಪ್ರಾರ್ಥಿಸಿ, ಶಿಕ್ಷಕಿಯರಾದ ಸುಮಿತ್ರ ಈರಪ್ಪ ಸ್ವಾಗತಿಸಿದರೆ, ಬಾಳೆಯಡ ಸವಿತಾ ಪೂವಯ್ಯ, ದಿವ್ಯಾ ಬಿ.ಆರ್ ನಿರೂಪಿಸಿದರು. ಮಾದೇಟಿರ ಪ್ರತಿಮಾ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.

ಇದಕ್ಕೂ ಮುನ್ನ ಪೂರ್ವಾಹ್ನ ೯ ಗಂಟೆಗೆ ಮಡಿಕೇರಿ ಮುಖ್ಯ ರಸ್ತೆಯಲ್ಲಿರುವ, ೫೦ ವರ್ಷ ತುಂಬಿರುವ ಜನರಲ್ ತಿಮ್ಮಯ್ಯ ಪ್ರತಿಮೆಗೆ ಮಡಿಕೇರಿ ಕೊಡವ ಸಮಾಜ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಆಡಳಿತಮಂಡಳಿ ಹಾಗೂ ಸಿಬ್ಬಂದಿಗಳು ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿದರು.