ಕೂಡಿಗೆ, ಮಾ, ೩೦ : ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಾಶಸ್ವಿಯಾಗಿದ್ದಾರೆ. ಕುಶಾಲನಗರದ ಹೆಚ್. ಅಕ್ಬರ್, ಕೇರಳ ಮೂಲದ ಮಹಮ್ಮದ್ ರಾಫಿ, ಟಿ.ಕೆ. ರಿಷಿಕುಮಾರ್ ಬಂಧಿತ ಆರೋಪಿಗಳು.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿನ ವ್ಯಾಪ್ತಿ ಯಾದ ಕೂಡಿಗೆ ಸರ್ಕಲ್ ಸಮೀಪ ಸೇತುವೆಯ ಬಳಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಖಚಿತವಾದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ದಾಳಿ ಮಾಡಿದಾಗ ಓರ್ವ ವ್ಯಕ್ತಿಯನ್ನು ಕೂಡಿಗೆಯಲ್ಲಿ ಬಂಧಿಸಿ, ನಂತರ ಅವರ ವಿಚಾರಣೆ ನಂತರ ಕುಶಾಲನಗರದ ಖಾಸಗಿ ವಸತಿಗೃಹದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ ಎರಡು ಬೈಕ್, ೫ ಮೊಬೈಲ್, ೧೩ ಗ್ರಾಂ. ಗಾಂಜಾ, ಹಾಗೂ ೪೧ ಗ್ರಾಂ. ಎಂಡಿಎAಎ ನಿಷೇದಿತ ಮಾದಕ ವಸ್ತು, ೯,೫೦೦ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ. ಕೆ.ಎಸ್. ಸುಂದರ್ರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಶಾಲನಗರ ಡಿವೈಎಸ್ಪಿ, ಆರ್.ವಿ. ಗಂಗಾಧರಪ್ಪ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಡಿ.ಎಸ್. ಪುನೀತ್, ಎಂ. ದಿನೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.