(ಕಾಯಪAಡ ಶಶಿ ಸೋಮಯ್ಯ)
ಮಡಿಕೇರಿ, ಮಾ. ೩೧: ಕೊಡವ ಕೌಟುಂಬಿಕ ಹಾಕಿ ಉತ್ಸವದ ೨೩ನೆಯ ವರ್ಷದಲ್ಲಿ ಬದಲಾವಣೆಯ ಗಾಳಿಯೊಂದಿಗೆ ಹೊಸ ಉತ್ಸಾಹ ಕಂಡುಬರುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ. ನಾಪೋಕ್ಲುವಿನಲ್ಲಿ ಜರುಗುತ್ತಿರುವ ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ ಇದೀಗ ದಿನಕಳೆದಂತೆ ಕುತೂಹಲ ಮೂಡಿಸುತ್ತಿದ್ದು, ಹಾಕಿ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸುತ್ತಿದೆ. ಬಲಿಷ್ಠ ಆಟಗಾರರನ್ನು ಒಳಗೊಂಡAತೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆAದು ಪರಿಗಣಿಸಲ್ಪಟ್ಟಿರುವ ಕೆಲವು ಕುಟುಂಬಗಳು ಈ ಬಾರಿ ಪರಾಭವಗೊಂಡು ಪಂದ್ಯಾವಳಿಯಿAದ ಹೊರ ಬೀಳುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ.
೨೦೧೭ರ ಬಿದ್ದಾಟಂಡ ಕಪ್ ಹಾಗೂ ೨೦೧೮ರ ಕುಲ್ಲೇಟಿರ ಕಪ್ ವಿಜೇತ ಹಾಲಿ ಚಾಂಪಿಯನ್ ಚೇಂದAಡ ಪ್ರಥಮ ಪಂದ್ಯದಲ್ಲೇ ಮುಗ್ಗರಿಸಿದೆ. ೨೦೧೭ರ ಬಿದ್ದಾಟಂಡ ಕಪ್ನಲ್ಲಿ ಫೈನಲ್ ತಲುಪಿದ್ದ ಹಾಗೂ ಆಗಿನ ರನ್ನರ್ಸ್ ಪರದಂಡ ತಂಡವೂ ಹೊರಬಿದ್ದಿದೆ.
ನೆಲ್ಲಮಕ್ಕಡ ಕಪ್ನ ರನ್ನರ್ಸ್ ಚೆಪ್ಪುಡಿರ ಕುಟುಂಬವೂ ನಿರ್ಗಮಿಸಿದೆ. ಇಂತಹ ಕೆಲ ಅಚ್ಚರಿಯ ಫಲಿತಾಂಶಗಳು ಈ ಬಾರಿ ಎದುರಾಗುತ್ತಿರುವುದು ಹಾಕಿ ಅಭಿಮಾನಿಗಳ ನಡುವೆ ಕೆಲವೊಂದು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಕಡಗದಾಳು ಮುಕ್ಕಾಟಿರ, ನಾಪಂಡ, ಐನಂಡ ಕುಟುಂಬಗಳು ಈ ಬಾರಿ ಉತ್ತಮ ಪ್ರದರ್ಶನದೊಂದಿಗೆ ಹೊಸ ನಿರೀಕ್ಷೆ ಮೂಡಿಸಿರುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ.
ಚರ್ಚೆಗೆ ಗ್ರಾಸವಾಗಿರುವುದು...
ಪ್ರಸಕ್ತ ವರ್ಷದ ಹಾಕಿ ಉತ್ಸವ ಈ ಹಿಂದಿನ ಉತ್ಸವಗಳಿಗಿಂತ ಬೇಗನೆ ನಡೆಯುತ್ತಿರುವುದು ಕೆಲ ಬದಲಾವಣೆಗಳಿಗೆ ಕಾರಣ ಎನ್ನಲಾಗುತ್ತಿದೆ. ಈ ಬಾರಿ ಚುನಾವಣೆ ಕಾರಣದಿಂದ ಅಪ್ಪಚೆಟ್ಟೋಳಂಡ ಕೆಲವು ದಿವಸಗಳ ಅಂದರೆ ಸುಮಾರು ೧೫ ರಿಂದ ೨೦ ದಿನಗಳ ಮುನ್ನವೇ ಪಂದ್ಯಾವಳಿ ಪ್ರಾರಂಭಿಸಿದೆ. ನಾಪೋಕ್ಲುವಿನಲ್ಲೇ ಈ ಬಾರಿ ಬಾಳೆಯಡ ಕಪ್ ಕ್ರಿಕೆಟ್ ನಿಗದಿಯಾಗಿರುವುದೂ ಇದಕ್ಕೆ ಮತ್ತೊಂದು ಕಾರಣ. ಎಸ್ಎಸ್ಎಲ್ಸಿ ಪರೀಕ್ಷೆ, ಕೆಲವೆಡೆ ಅಂತರಕಾಲೇಜು - ವಿವಿ ಪಂದ್ಯಾಟ, ವಾರ್ಷಿಕ ವರ್ಷದ ಅಂತ್ಯ, ಕೆಲವು ರಾಷ್ಟಿçÃಯ ಪಂದ್ಯಾವಳಿಗಳೂ ಪ್ರಸ್ತುತ ನಡೆಯುತ್ತಿರುವುದು ಇದರೊಂದಿಗೆ ಉದ್ಯೋಗದಲ್ಲಿರುವ ಆಟಗಾರರಿಗೆ ರಜೆ ಸಮಸ್ಯೆ ಕಾಡುತ್ತಿರುವುದು ಇಂತಹ ಕಾರಣಗಳು ಕೆಲವು ಪ್ರಮುಖ ಆಟಗಾರರಿಗೆ ಈ ಬಾರಿ ಭಾಗವಹಿಸಲು ಕಷ್ಟಕರವಾಗಿದೆ ಎನ್ನಲಾಗಿದೆ.
ಸ್ಟಾರ್ ಆಟಗಾರರ ಗೈರು ಕೆಲವು ಕುಟುಂಬಗಳಿಗೆ ಮುಳುವಾಗಿದೆ. ಜನರ ಮಾತಿನಂತೆ ಕೆಲವು ಕುಟುಂಬಗಳ ಸ್ಟಾರ್ ಆಟಗಾರರು ಆರಂಭಿಕ ಸುತ್ತಿನ ಪಂದ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರದೆ, ಮುಂದಿನ ಸುತ್ತುಗಳಿಂದ ಬರುವುದಾಗಿ ಹೇಳುತ್ತಿರುವದೂ ಆರಂಭದಲ್ಲೇ ಸೋಲಿಗೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ. ಇದು ನಾಕೌಟ್ ಪಂದ್ಯವಾಗಿದ್ದು, ಮುಗ್ಗರಿಸಿದಲ್ಲಿ ನಂತರ ಅವಕಾಶವೇ ಸಿಗದು.
ಇಂತಹ ಕಾರಣಗಳು ಒಂದೆಡೆಯಾದರೆ ಮತ್ತೊಂದೆಡೆ ಹೊಸ ಪ್ರತಿಭೆಗಳು ಸಾಧನೆ ತೋರುತ್ತಿರುವುದು ಮತ್ತೊಂದು ಉತ್ಸಾಹ ಕಂಡುಬರುತ್ತಿದೆ. ಕೌಟುಂಬಿಕ ಹಾಕಿ ಉತ್ಸವ ೨೦೧೮ ರಿಂದ ನಾಲ್ಕು ವರ್ಷಗಳ ಕಾಲ ಕಾರಣಾಂತರಗಳಿAದ ನಡೆದಿರಲಿಲ್ಲ. ಈ ನಾಲ್ಕು ವರ್ಷಗಳ ಅಂತರದಲ್ಲಿ ಆಗಿನ ಕೆಲವು ಪ್ರಮುಖ ಆಟಗಾರರ ವಯಸ್ಸು ನಾಲ್ಕು ವರ್ಷ ಹೆಚ್ಚಾಗಿದೆ. ಸಹಜವಾಗಿ ಇದೂ ಹಿನ್ನೆಡೆಯಾಗುತ್ತದೆ. ಇದರೊಂದಿಗೆ ಕೆಲವಾರು ಕುಟುಂಬಗಳಲ್ಲಿ ಹೊಸ ಹೊಸ ಆಟಗಾರರು ರೂಪುಗೊಂಡಿದ್ದು, ಇವರ ಪ್ರತಿಭೆ ಗಮನ ಸೆಳೆಯುತ್ತಿದೆ. ಯಾವ ಕುಟುಂಬದಲ್ಲಿ ಯರ್ಯಾರು ಪ್ರತಿಭಾನ್ವಿತ ಆಟಗಾರರಿದ್ದಾರೆ ಎಂಬ ಹೆಚ್ಚಿನ ಮಾಹಿತಿ ಜನತೆಗೆ ಇಲ್ಲ.
ಹೊಸ ಹೊಸ ಯುವ ಆಟಗಾರರ ಪ್ರದರ್ಶನ ಕೂಡ ಹುಬ್ಬೇರಿಸುವಂತಿದ್ದು, ಇದಕ್ಕೆ ಬಲಿಷ್ಠ ತಂಡಗಳನ್ನು ಸೋಲಿಸಿರುವ ಕುಟುಂಬಗಳನ್ನು ಉದಾಹರಿಸಬಹುದಾಗಿದೆ. ಈ ಹಿಂದಿನ ಕೆಲವು ತಂಡಗಳೇ ಬಲಿಷ್ಠ ಎನ್ನಲಾಗುವಂತಿಲ್ಲ. ಇಂತಹ ಬೆಳವಣಿಗೆಗಳ ನಡುವೆ ಅಪ್ಪಚೆಟ್ಟೋಳಂಡ ಕಪ್ ಫೈನಲ್ ದಿನದತ್ತ ಸಾಗುತ್ತಿರುವಂತೆ ಕೌತುಕಕ್ಕೆ ಎಡೆಯಾಗುತ್ತಿದೆ. ೩೩೬ ಕುಟುಂಬಗಳ ಪೈಕಿ ಈ ತನಕ ೨೭೨ ಕುಟುಂಬಗಳು (ಮಾ. ೩೧ಕ್ಕೆ) ಹೊರಬಿದ್ದಿದ್ದು, ಇದೀಗ ಕಣದಲ್ಲಿ ೬೪ ಕುಟುಂಬಗಳು ಮಾತ್ರ ಬಾಕಿ ಉಳಿದಿವೆ.
೬೪ ಕುಟುಂಬಗಳ ಪೈಕಿ ಮಾಜಿ ಚಾಂಪಿಯನ್ ಕುಟುಂಬಗಳು ಸೇರಿದಂತೆ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿರುವ ಕುಟುಂಬಗಳು ಇದ್ದು, ಈ ಬಾರಿಯ ಚಾಂಪಿಯನ್ ಯಾರಾಗಬಹುದು ಎಂಬದು ಕುತೂಹಲ ಮೂಡಿಸುತ್ತಿದೆ.