ನಾಪೋಕ್ಲು, ಮಾ. ೩೧: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹದಿಮೂರನೆಯ ದಿನದ ಪಂದ್ಯಾಟದಲ್ಲಿ ಮಂಡೇಡ, ಕುಲ್ಲೇಟಿರ, ಮುಕ್ಕಾಟಿರ(ಪುಲಿಕೋಟು), ಚೌರೀರ(ಹೊದ್ದೂರು), ಅಲ್ಲಂಡ, ಮುರುವಂಡ, ಮಾರ್ಚಂಡ, ಐನಂಡ, ಮೇಕೇರಿರ, ನೆಲ್ಲಮಕ್ಕಡ, ಚೆಕ್ಕೆರ, ಕೋದಂಡ, ಇಟ್ಟಿರ, ಐಚೆಟ್ಟಿರ, ಕಲಿಯಂಡ, ಚೇಂದಿರ, ಪುದಿಯೊಕ್ಕಡ, ಕೊಂಗAಡ, ಬಾರಿಯಂಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿತು.
ಮೈದಾನ ೧ರ ಕುಂದತ್ ಮಾಳೇಟಿರ(ಕುಕ್ಲೂರು) ಮತ್ತು ಮಂಡೇಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮಂಡೇಡ ತಂಡವು ಮಾಳೇಟಿರ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಮುಕ್ಕಾಟಿರ ತಂಡವು ಕೋಡಿರ ತಂಡವನ್ನು ೪-೦ ಗೋಲಿನ ಅಂತರದಿAದ, ಚೌರೀರ ತಂಡವು ನೆರವಂಡ ತಂಡವನ್ನು ೩-೦ ಗೋಲಿನ ಅಂತರದಿAದ, ಅಲ್ಲಂಡ ತಂಡವು ಚಿರಿಯಪಂಡ ತಂಡವನ್ನು ೫-೩ ಗೋಲಿನ ಅಂತರದಿAದ, ಮುರುವಂಡ ತಂಡವು ಚೋಯಮಾಡಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು.
ಮೈದಾನ ೨ರಲ್ಲಿ ನಡೆದ ಮಾರ್ಚಂಡ ಮತ್ತು ಚೆರುವಾಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾರ್ಚಂಡ ತಂಡವು ಚೆರುವಾಳಂಡ ತಂಡವನ್ನು ೫-೨ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಐನಂಡ ತಂಡವು ಪರದಂಡ ತಂಡವನ್ನು ೪-೨ ಗೋಲಿನ ಅಂತರದಿAದ, ಮೇಕೇರಿರ ತಂಡವು ಪೊನ್ನಚೆಟ್ಟಿರ ತಂಡವನ್ನು ೪-೦ ಗೋಲುಗಳ ಅಂತರದಿAದ, ನೆಲ್ಲಮಕ್ಕಡ ತಂಡವು ಮೂಕಳೇರ ತಂಡವನ್ನು ೪-೦ ಗೋಲಿನ ಅಂತರದಿAದ, ಚೆಕ್ಕೆರ ತಂಡವು ಉದಿಯಂಡ ತಂಡವನ್ನು ೩-೦ ಗೋಲುಗಳ ಅಂತರದಿAದ, ಕೋದಂಡ ತಂಡವು ಚೌರೀರ ತಂಡವನ್ನು ೧-೦ ಗೋಲುಗಳ ಅಂತರದಿAದ, ಇಟ್ಟಿರ ತಂಡವು ಮಲ್ಲಮಡ ತಂಡವನ್ನು ೩-೦ ಗೋಲಿನ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು.
ಮೈದಾನ ೩ರಲ್ಲಿ ನಡೆದ ಐಚೆಟ್ಟಿರ ಮತ್ತು ಶಾಂತೆಯAಡ ತಂಡಗಳ ನಡುವಿನ ಪಂದ್ಯದಲ್ಲಿ ಐಚೆಟ್ಟಿರ ತಂಡವು ಶಾಂತೆಯAಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಚೇಂದಿರ ತಂಡವು ಅಪ್ಪನೆರವಂಡ ತಂಡವನ್ನು ೪-೦ ಗೋಲುಗಳ ಅಂತರದಿAದ, ಪುದಿಯೊಕ್ಕಡ ತಂಡವು ಶಿವಚಾಳಿಯಂಡ ತಂಡವನ್ನು ೨-೦ ಗೋಲಿನ ಅಂತರದಿAದ, ಕೊಂಗAಡ ತಂಡವು ಚೆಯ್ಯಂಡ ತಂಡವನ್ನು ೨-೦ ಗೋಲುಗಳ ಅಂತರದಿAದ, ಬಾರಿಯಂಡ ತಂಡವು ತಂಬುಕುತ್ತಿರ ತಂಡವನ್ನು ೧-೦ ಗೋಲಿನ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು.
-ಪಿ.ವಿ.ಪ್ರಭಾಕರ್