ಶ್ರೀರಾಮ ಮಹಾವಿಷ್ಣುವಿನ ಏಳನೇ ಅವತಾರ ಶ್ರೀ ರಾಮ ಕ್ರಿ. ಪೂ. ೫೧೧೪ರಲ್ಲಿ ಜನಿಸಿರಬಹುದೆಂದು ಪೂರ್ವಿಕರು ಅಂದಾಜಿಸಿದ್ದಾರೆ. ಸೂರ್ಯವಂಶದ ಅಯೋಧ್ಯೆಯ ರಾಜ ದಶರಥನ ನಾಲ್ಕು ಜನ ಮಕ್ಕಳಲ್ಲಿ ಹಿರಿಯವನು ಶ್ರೀರಾಮ. ಎಷ್ಟೋ ವರ್ಷ ದಶರಥ ಮಹಾರಾಜನಿಗೆ ಮಕ್ಕಳಾಗದೆ ಕೊನೆಗೆ ಪುತ್ರ ಕಾಮೇಷ್ಠಿ ಯಾಗ ಮಾಡಿದ ಬಳಿಕ ರಾಮ, ಲಕ್ಷö್ಮಣ, ಭರತ, ಶತ್ರುಘ್ನರರ ಜನನವಾಯತು.

ದಶರಥನು ಕೌಸಲ್ಯೆ, ಸುಮಿತ್ರ ಮತ್ತು ಕೈಕೇಯಿ ಎಂಬ ಮೂವರು ರಾಜಕುಲದ ಸ್ತಿçÃಯರನ್ನು ಮದುವೆಯಾಗಿದ್ದನು ಮತ್ತು ಇವರಲ್ಲದೆ ೩೫೦ ಉಪಪತ್ನಿಯರಿದ್ದರೆಂದು ವಾಲ್ಮೀಕಿ ಮಹರ್ಷಿ ಹೇಳುತ್ತಿದ್ದರೆಂದು ಅಭಿಪ್ರಾಯ. ಸಂತಾನ ಭಾಗ್ಯವಿಲ್ಲದ ದಶರಥ ಋಷ್ಯ ಶೃಂಗ ಮಹರ್ಷಿಗಳ ನೇತೃತ್ವದಲ್ಲಿ ಪುತ್ರಿಕಾಮೇಷ್ಠಿ ಯಾಗವನ್ನು ಮಾಡಿ ಅದರ ಫಲದಿಂದ ಅಗ್ನಿದೇವನು ಪ್ರಸಾದಿಸಿದ ಪಾಯಸವನ್ನು ಸ್ವೀಕರಿಸಿದ ಕೌಸಲ್ಯೆಯು ರಾಮನಿಗೂ, ಸುಮಿತ್ರೆಯು ಲಕ್ಷö್ಮಣ, ಮತ್ತು ಶತ್ರುಘ್ನರಗೂ ಕೈಕೇಯಿ ಭರತನಿಗೂ ಜನ್ಮವಿತ್ತರು. ಈ ಮಕ್ಕಳು ಕೆಲವೇ ಘಂಟೆಗಳ ಅಂತರದಲ್ಲಿ ಜನಿಸಿದರು.

ಶ್ರೀರಾಮನು ವಿಶ್ವಾಮಿತ್ರ ಮಹರ್ಷಿಗಳಿಂದ ಶಸ್ತಾçಸ್ತçಗಳ ಪ್ರಯೋಗದ ಜೊತೆಗೆ ಎಲ್ಲಾ ಬಗೆಯ ವಿದ್ಯೆಗಳನ್ನು, ಧರ್ಮ ಸೂಕ್ಷö್ಮ ನೈಪುಣ್ಯವನ್ನು ಯುಕ್ತಾಯುಕ್ತ ವಿವೇಚನೆಯನ್ನು ಕಲಿತು ಆದರ್ಶ ಶಿಷ್ಯ ಎನಿಸಿಕೊಂಡರು.

ಶ್ರೀರಾಮನ ನಾಮಕರಣವನ್ನು ಮಾಡಿದವರು ವಶಿಷ್ಠ ಮಹರ್ಷಿಗಳು ‘‘ರಾಮ’’ ಎಂಬ ಎರಡಕ್ಷರಲ್ಲಿ ಮಹತ್ವವಾದ ಶಕ್ತಿಯೇ ಅಡಗಿದೆ. ಹೇಗೆಂದರೆ ಅವರು ಓಂ ನಮೋ ನಾರಾಯಣ ಎಂಬ ಅಷ್ಟಾಕ್ಷರಿ ಮಂತ್ರದಿAದ ‘‘ರಾ’’ ಎಂಬ ಅಕ್ಷರವನ್ನು ತೆಗೆದುಕೊಂಡು ‘‘ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರದಿAದ ‘‘ಮ’’ ಎಂಬ ಅಕ್ಷರವನ್ನು ತೆಗೆದುಕೊಂಡು ‘ರಾಮ’ ಎಂಬ ಹೆಸರನ್ನಿಟ್ಟರು. ಶ್ರೀ ರಾಮನನ್ನು ಸ್ತುತಿಸದ ನಾಲಗೆಯಿಲ್ಲ, ಗುಣಗಳನ್ನು ಕೇಳದ ಕಿವಿಗಳಿಲ್ಲ ಎನ್ನುತ್ತಾರೆ ಮಹಾತ್ಮರು. ಮಾನವ ಕುಲಕ್ಕೆ ಉತ್ತಮ ಮಾರ್ಗವನ್ನು ತೋರಿಸುವ ಉದ್ದೇಶದಿಂದ ಮನುಷ್ಯ ರೂಪ ತಾಳಿ ಈ ಭೂಮಿಯಲ್ಲಿ ಜನಿಸಿದ ಅವತಾರ ಪುರುಷನೇ ಶ್ರೀರಾಮ.

ಜನಕ ಮಹಾರಾಜನು ಸೀತಾ ಸ್ವಯಂವರಕ್ಕಾಗಿ ವಿಶ್ವಾಮಿತ್ರರ ಆಶ್ರಮಕ್ಕೆ ಆಹ್ವಾನವನ್ನು ಕಳುಹಿಸಿದ ಕಾರಣಕ್ಕಾಗಿ ವಿಶ್ವಾಮಿತ್ರರು ಶ್ರೀರಾಮ, ಲಕ್ಷö್ಮಣ, ಭರತ ಮತ್ತು ಶತ್ರುಘ್ನಾದಿಗಳನ್ನು ಸ್ವಯಂವರಕ್ಕೆ ಕರೆದೊಯ್ದರು, ಸ್ವಯಂವರದಲ್ಲಿ ತನ್ನ ಭುಜಬಲ ಪರಾಶ್ರಮದಿಂದ ಶಿವಧನಸ್ಸನ್ನು ಮುರಿದು ಜಯಶೀಲನಾಗುತ್ತಾನೆ. ರಾವಣಾಧಿಯಾಗಿ ಅನೇಕ ರಾಜರುಗಳು ಪ್ರಯತ್ನಿಸಿ ವಿಫಲರಾಗಿರುತ್ತಾರೆ. ಆ ಸಮಯದಲ್ಲಿ ಜನಕ ಮಹಾರಾಜನು ತುಳಸಿ ಪಾತ್ರೆಯಲ್ಲಿ ಜಲವನ್ನು ಸುರಿಸುತ್ತಾ ಸೀತೆಯ ಕೈಯನ್ನು ಶ್ರೀರಾಮನ ಕೈಯಲ್ಲಿಟ್ಟು ಅಗ್ನಿಸಾಕ್ಷಿಯಾಗಿ ಇವಳು ‘ನಿನ್ನ ಸಹಧರ್ಮಿಣಿ’ ಜೀವನ

ಪರ್ಯಂತ ಜೊತೆಗಿರುವ ಸಂಗಾತಿಯೆAದು ಸೀತೆಯನ್ನು ರಾಮನಿಗೆ ಒಪ್ಪಿಸುತ್ತಾನೆ. ದಶರಥನು ಶ್ರೀರಾಮನನ್ನು ಯುವರಾಜನನ್ನಾಗಿ ಮಾಡಬೇಕೆಂದು ನಿರ್ಧಾರ ಮಾಡಿ ಈ ವಿಷಯವನ್ನು ಶ್ರೀರಾಮನಿಗೆ ತಿಳಿಸುತ್ತಾರೆ. ಆದರೆ ಇದನ್ನು ಕೇಳಿದ ಮಂಥರೆಯು ಕೈಕೇಯಿಯ ಮನಸ್ಸಿನಲ್ಲಿ ವಿಷದ ಬೀಜವನ್ನು ಬಿತ್ತಿ ಶ್ರೀರಾಮ ರಾಜನಾದರೆ ಕೌಸಲ್ಯೆಯ ಅಡಿಯಾಳು ಆಗಬೇಕಾಗುತ್ತದೆ ಎಂಬ ದುಷ್ಟ ಯೋಚನೆಗಳನ್ನು ಹುಟ್ಟು ಹಾಕುತ್ತಾಳೆ. ಹಿಂದೊಮ್ಮೆ ದಶರಥನು ನಿನ್ನ ಮಗನನ್ನೇ ರಾಜನÀನ್ನಾಗಿ ಮಾಡುತ್ತೇನೆಂದಿದ್ದ ವಾಗ್ದಾನವನ್ನು ನೆನಪಿಸುತ್ತಾಳೆ. ಈ ಎಲ್ಲಾ ಕಾರಣದಿಂದ ಶ್ರೀರಾಮನ ಪಟ್ಟಾಭಿಷೇಕ ನಿಂತು, ರಾಮ, ಲಕ್ಷö್ಮಣ, ಸೀತೆಯೊಂದಿಗೆ ವನವಾಸಕ್ಕೆ ಹೋಗಲು ನಿರ್ಧರಿಸುತ್ತಾನೆ. ಲಕ್ಷö್ಮಣ ಪ್ರತಿಭಟಿಸಿದರೂ ಕೇಳದೆ ತಂದೆಯ ಮಾತಿನಂತೆ ವನವಾಸಕ್ಕೆ ತೆರಳಲು ಸಿದ್ಧನಾಗುತ್ತಾನೆ.

ರಾವಣನನ್ನು ಸಂಹರಿಸಿ ಹಿಂತಿರುಗುವಾಗ ಭಾರದ್ವಾಜರ ಆಶ್ರಮದಲ್ಲಿ ಶ್ರೀರಾಮ ತಂಗಿರುತ್ತಾನೆ. ಅವರ ಮನಸ್ಸಿನಲ್ಲಿ ಗೊಂದಲ ಆಂಜನೇಯನನ್ನು ಹತ್ತಿರ ಕರೆದು ಭರತನಿಗೆ ತಾನು ಅಯೋಧ್ಯೆಗೆ ಮರಳುವುದು ಇಷ್ಟವಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಕಳುಹಿಸಿದ. ಭರತನಿಗೆ ಆ ರಾಜ್ಯ ಇಷ್ಟವಿದ್ದು ಆಡಳಿತ ಮುಂದುವರೆಸುವುದಾದರೆ ನಾವಿಲ್ಲೇ ಇರೋಣ. ಆತನಿಗೆ ತೊಂದರೆ ಕೊಡುವುದು ನನ್ನ ಮನಸ್ಸು ಒಪ್ಪುವುದಿಲ್ಲ ಎನ್ನುತ್ತಾರೆ ಶ್ರೀರಾಮನಿಗೆ ಯಾರಿಗೂ ನೋವುಂಟು ಮಾಡುವ ಸ್ವಭಾವವಿರಲಿಲ್ಲ.

ವಾಲ್ಮೀಕಿ ಮಹರ್ಷಿಗಳು ೨೪ ಸಾವಿರ ಶ್ಲೋಕಗಳಿಂದ ಕೂಡಿದ ರಾಮಾಯಣವನ್ನು ರಚಿಸಿರುವರು. ‘‘ರಮಂತೇ ಯೋಗಿನಃ ಅಸ್ಮಿನ್ ಇತಿರಾಮ ಎಂದರೆ ಯೋಗಿಗಳು ರಾಮಧ್ಯಾನದಲ್ಲಿ ಮಗ್ನರಾಗಿ ಸಮಾದಿಸ್ಥರಾಗಿರುತ್ತಾರೆ. ರಾಮೋ ರಮಯತಾಂವರಃ ಎಂಬAತೆ ಆನಂದ ನೀಡುವ ನಾಮಗಳಲ್ಲಿ ಶ್ರೀರಾಮನಾಮವೇ ಶ್ರೇಷ್ಠ ಪಾರ್ವತಿ ದೇವಿಯು ಶ್ರೀರಾಮನಾಮದ ಸ್ವಾರಸ್ಯವನ್ನು ತಿಳಿಯಲು ಶಿವನಲ್ಲಿ ಈ ರೀತಿ ಕೇಳುತ್ತಾಳೆ. ‘‘ಕೇನೋಪಾಯೋನ ಲಘುನಾ ವಿಪೋರ್ನಾಮ ಸಹಸ್ರಕಮ್ ಪಠತ್ಯೆ ಪಂಡಿರ್ತೈರ್ನಿತ್ಯA ಶ್ರೋತುವಿಚ್ರಾಮ್ಯ ಹಂ ಪ್ರಭೋ’’ ಎಂದು ಕೇಳುತ್ತಾಳೆ ಅದಕ್ಕೆ ಶಿವನು ‘‘ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮ, ಸಹಸ್ರ ನಾಮ ತತ್ತುಲ್ಯಂ ಶ್ರೀರಾಮ ನಾಮ ವರಾನನೇ’’ ಎಂದು ಹೇಳುತ್ತಾರೆ. ಅಂದರೆ ಶ್ರೀರಾಮರಾಮರಾಮ ಎಂದು ಹೇಳುತ್ತಾರೆ. ಅಂದರೆ ಶ್ರೀ ರಾಮ ರಾಮ ರಾಮ ಎಂದು ಜಪಿಸಿದರೂ ಶ್ರೀ ವಿಷ್ಣು ಸಹಸ್ರ ನಾಮ ಪಠನ ಮಾಡಿದ ಫಲ ದೊರೆಯುವುದೆಂದು ಪಾರ್ವತಿ ದೇವಿಗೆ ತಿಳಿಸುತ್ತಾನೆ.

ಶ್ರೀರಾಮ, ಸೀತೆ ಆದರ್ಶ ದಂಪತಿಗಳು ರಾವಣ ಸೀತೆಯನ್ನು ಅಪಹರಿಸಿದಾಗ ಇಬ್ಬರ ವಿರಹ ವೇದನೆ ಹೇಳತೀರದು. ರಾಮಸೀತೆಯನ್ನು ಹುಡುಕುತ್ತಾ ಊರೂರು ಅಲೆದು ಹನುಮನ ಮುಖೇನ ಸುಗ್ರೀವನ ಬಳಿ ಬಂದರು. ಅಲ್ಲಿಂದ ವಾಲಿವಧೆ, ಚೂಡಾಮಣಿ ಪ್ರಸಂಗವೆಲ್ಲಾ ನಡೆಯಿತು, ಲಂಕೆಯಿAದ ಸೀತೆಯನ್ನು ಕರೆತರಲು ಸಮುದ್ರರಾಜನನ್ನು ಪ್ರಾರ್ಥಿಸಿ, ಅಭಯಪಡೆದು ನೀಲ ಎಂಬ ಕಪಿಯ ಮುಂದಾಳುತನದಲ್ಲಿ ಕಪಿಗಳೆಲ್ಲ ಸೇರಿ ಸೇತುವೆ ನಿರ್ಮಿಸಿದರು. ‘‘ಶ್ರೀರಾಮ ಜಯರಾಮ ಜಯ ಜಯ ರಾಮ’’

-ಗೌರಮ್ಮ ಮಾದಮ್ಮಯ್ಯ, ಮಡಿಕೇರಿ.