ಮಡಿಕೇರಿ, ಮಾ. ೨೯: ಹೊದ್ದೂರು ಪಾಲೆಮಾಡುವಿನಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಜಾಗದ ವಿಚಾರ ಕೆ.ಎಸ್.ಸಿ.ಎ. ಸಂಸ್ಥೆಗೆ ಅಧಿಕೃತ ಹಸ್ತಾಂತರದ ಮೂಲಕ ತಾರ್ಕಿಕ ಅಂತ್ಯಕAಡAತಾಗಿದೆ.

ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತದ ಮೂಲಕ ನಿನ್ನೆ ಬೆಳಿಗ್ಗೆಯಿಂದ ಆರಂಭಗೊAಡಿದ್ದ ಜಾಗದ ಸರ್ವೆ ಮತ್ತಿತರ ದಾಖಲೆಗಳನ್ನು ಸರಿಪಡಿಸುವ ಕಾರ್ಯ ಇಂದು ಸಂಜೆತನಕವೂ ನಡೆದು ಬಳಿಕ ತಹಶೀಲ್ದಾರ್ ಕಿರಣ್ ಸೇರಿದಂತೆ ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ೧೧.೭೦ ಎಕರೆಯ ದಾಖಲಾತಿಯನ್ನು ಕೆ.ಎಸ್.ಸಿ.ಎ. ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಅವರಿಗೆ ಹಸ್ತಾಂತರಿಸಿದರು.

ಇದರ ಒತ್ತಿನಲ್ಲಿ ಸ್ಮಶಾನಕ್ಕೆಂದು ನೀಡಲಾಗಿರುವ ಸ್ಮಶಾನ ಜಾಗವನ್ನು ಪ್ರತ್ಯೇಕಿಸಲಾಗಿದ್ದು, ಇದನ್ನು ಸಂಪೂರ್ಣವಾಗಿ ವೀಡಿಯೋ ಚಿತ್ರೀಕರಣ ಮಾಡಲಾಗಿದೆ. ಈ ಸ್ಥಳಕ್ಕೆ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.

೧೧.೭೦ ಎಕರೆ ಜಾಗವನ್ನು ಸುಪರ್ದಿಗೆ ಪಡೆದಿರುವ ಕೆ.ಎಸ್.ಸಿ.ಎ. ಸುತ್ತಲೂ ಟ್ರಂಚ್ ನಿರ್ಮಿಸಿದ್ದು, ಈ ಪ್ರದೇಶದಲ್ಲಿ ಕೆಮರಾ ವ್ಯವಸ್ಥೆಯೊಂದಿಗೆ ಕಾವಲುಗಾರರನ್ನು ನಿಯೋಜಿಸಿ ಕೊಂಡಿದೆ. ಇಂದೂ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಕೆಲಸ ಮುಂದುವರಿಯಿತು.