ಕೂಡಿಗೆ, ಮಾ. ೨೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ತಾ. ೩೦ ರಂದು (ಇಂದು) ನಡೆಯಲಿದೆ.

ರಾಮನವಮಿಯ ಪ್ರಯುಕ್ತ ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ ನಡೆದ ನಂತರ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥಾರೋಹಣ, ರಥಬಲಿ ಹಾಗೂ ಬ್ರಹ್ಮ ರಥೋತ್ಸವ ೧.೩೦ ಗಂಟೆಗೆ ನಡೆಯಲಿದೆ.