ಕೂಡಿಗೆ, ಮಾ. ೨೯: ಕುಶಾಲ ನಗರ ಮತ್ತು ಸೋಮವಾರಪೇಟೆ ತಾಲೂಕು ಶ್ರೀ ದುರ್ಗ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಆರ್. ಪ್ರಭಾಕರ್ ಅವರು ಅವಿರೋಧವಾಗಿ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಬಿ.ಕೆ. ಮೋಹನ್ ಅವಿರೋಧವಾಗಿ ಆಯ್ಕೆಗೊಂಡರು. ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಎಂ.ಡಿ. ನಟರಾಜ್, ಎಂ.ಆರ್. ಪುಟ್ಟಸ್ವಾಮಿ, ಹೆಚ್.ಕೆ. ಗಣೇಶ್, ಕೆ.ಎನ್. ಮಹೇಶ್, ಚಿಕ್ಕಯ್ಯ, ಕೆ. ಜಗದೀಶ್, ಬಿ.ಡಿ. ಮಹದೇವ, ಕೆ.ಆರ್. ರವಿ, ಸಿ.ಕೆ. ಉದಯಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಬಿ. ಜಯಶ್ರೀ, ಶಾಂತ ಬಿ. ಬೆಟ್ಟಗೇರಿ, ಹಿಂದುಳಿದ ವರ್ಗ ಎ ಮೀಸಲು ವಿಭಾಗದಿಂದ ಎಲ್. ಗಿರೀಶ್, ವಿ.ಕೆ. ಪುನೀತ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸಾವಿತ್ರಿ ಅವಿರೋಧವಾಗಿ ಆಯ್ಕೆಗೊಂಡಿರುವುದಾಗಿ ಚುನಾವಣಾ ರಿಟರ್ನಿಂಗ್ ಅಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ಮೋಹನ್ ತಿಳಿಸಿದ್ದಾರೆ.