ಮಡಿಕೇರಿ, ಮಾ. ೨೯: ಬೆಂಗಳೂರಿನಲ್ಲಿ ವಾಸವಿರುವ ಕ್ಗ್ಗಟ್ಟ್ನಾಡ್ ವ್ಯಾಪ್ತಿಯ ಸದಸ್ಯರನ್ನು ಒಳಗೊಂಡ ಕ್ಗ್ಗಟ್ಟ್ನಾಡ್ ಕೊಡವ ಸಂಘದ ಸಂತೋಷಕೂಟ ಕಾರ್ಯ ಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
ಅಲ್ಲಿನ ಕೊಡವ ಸಮಾಜದ ಹರದಾಸ ಅಪ್ಪಚ್ಚಕವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಒಲಂಪಿಯನ್, ಚೆಪ್ಪುಡೀರ ಎಸ್. ಪೂಣಚ್ಚ ಹಾಗೂ ಫ್ಯಾಕ್ಟರೀಸ್ ಅಂಡ್ ಬಾಯ್ರ್ಸ್ ಸಂಸ್ಥೆಯ ಅಡಿಷನಲ್ ಡೈರೆಕ್ಟರ್ ಆಗಿರುವ ಕರ್ತಮಾಡ ಜಿ. ನಂಜಪ್ಪ ಅವರುಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಪೂಣಚ್ಚ ಹಾಗೂ ನಂಜಪ್ಪ ಅವರುಗಳು ಸಂಘದ ಅಭಿವೃದ್ಧಿ, ಜನಾಂಗದ ಮುಂದಿನ ಬೆಳವಣಿಗೆ ಹಾಗೂ ಆಚಾರ - ವಿಚಾರಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ಸದಸ್ಯ ಹಾಗೂ ಬೆಂಗಳೂರು ಕೊಡವ ಸಮಾಜದ ಮಾಜಿ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಅವರು ಸಂಘದ ಕುರಿತು ಮಾತನಾಡಿದರು. ಈ ಸಂದರ್ಭ ಸಂಘದ ಸದಸ್ಯರು ವಿವರವಿರುವ ಡೈರೆಕ್ಟರಿಯನ್ನು ಬಿಡುಗಡೆ ಮಾಡಲಾಯಿತು.
ಬೆಂಗಳೂರು ಕೊಡವ ಸಮಾಜ ಆಡಳಿತ ಮಂಡಳಿಯ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿರುವ ಕ್ಗ್ಗಟ್ಟ್ ನಾಡಿನವರಾದ ಲೆ.ಕ. ಚಿರಿಯಪಂಡ ವಿವೇಕ್ ಮುತ್ತಣ್ಣ ಹಾಗೂ ಖಜಾಂಚಿ ಬಲ್ಯಮೀದೇರಿರ ಗಣೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಮಂಡಚAಡ ಸುರೇಶ್ ಪೂಣಚ್ಚ ಸಂಘದ ಚಟುವಟಿಕೆ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ಮಲ್ಲೇಂಗಡ ಮಧು ಕುಶಾಲಪ್ಪ ವರದಿ ನೀಡಿ, ಖಜಾಂಚಿ ಮಾಚಿಮಾಡ ಕುಶಾಲಪ್ಪ ಲೆಕ್ಕಪತ್ರ ಮಂಡಿಸಿದರು. ಬೊಳ್ಳಜೀರ ಶ್ರೇಯಾ ಕಿರಣ್ ಪ್ರಾರ್ಥಿಸಿ, ಉಪಾಧ್ಯಕ್ಷ ತೀತಿರ ರೋಷನ್ ಅಪ್ಪಚ್ಚು ಸ್ವಾಗತಿಸಿದರು. ಬಯವಂಡ ಶರತ್ ಕುಶಾಲಪ್ಪ, ಗುಡ್ಡಮಾಡ ಸದಾ ತಮ್ಮಯ್ಯ ಅತಿಥಿ ಪರಿಚಯಿಸಿದರು. ಅಪರಾಹ್ನದ ಊಟದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನೆಲ್ಚಿಬೊಳಿ ಕೊಡವ ಸಿನಿಮಾ ಪ್ರದರ್ಶನ ಜರುಗಿತು. ವಾಲಗತಾಟ್ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಚೊಟ್ಟಂಗಡ ಲೋಕೇಶ ಗಣಪತಿ ಹಾಗೂ ಕೋಳೇರ ಮನು ಮೊಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.