ಕೂಡಿಗೆ, ಮಾ. ೨೮: ಕೂಡಿಗೆ ಗ್ರಾ.ಪಂ.ಯ ಸಭೆಯು ಸೋಮವಾರ ಪೇಟೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನು ನಡೆಸಲು ಕಳೆದ ೫ ದಿನಗಳಿಂದ ಎಲ್ಲಾ ಸದಸ್ಯರುಗಳಿಗೆ ಮತ್ತು ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ ಅಭಿವೃದ್ಧಿ ಅಧಿಕಾರಿ ತಿಳಿಸಿದರೂ ಸಹ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾತ್ರ ಅನಾರೋಗ್ಯದ ಕಾರಣ ನೀಡಿ ಸಭೆಗೆ ಗೈರು ಹಾಜರಿಯಾಗಿದ್ದರು.
ಸಭೆಯು ಆರಂಭಗೊAಡ ತಕ್ಷಣವೇ ಗ್ರಾ.ಪಂ. ಸದಸ್ಯರಾದ ಟಿ.ಪಿ. ಹಮೀದ್, ಅನಂತ್ ಅರುಣ್ ರಾವ್ ಗಿರೀಶ್ ರವಿ ಜಯಶ್ರೀ ಸೇರಿದಂತೆ ೧೧ ಮಂದಿ ಸದಸ್ಯರು ಅಧ್ಯಕ್ಷೆ ಮಂಗಳಾ ಪ್ರಕಾಶ್ ಸಭೆಗೆ ಗೈರುಹಾಜರಿ ಯಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಸದಸ್ಯರು ಕಳೆದ ನಾಲ್ಕು ತಿಂಗಳುಗಳಿAದ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಯಾವುದೇ ಕಾಮಗಾರಿಗಳ ಬಿಲ್ಗಳಿಗೆ ಅಧ್ಯಕ್ಷರು ಸಹಿ ಮಾಡದೇ ಗುತ್ತಿಗೆದಾರರಿಗೆ ಹಣ ಸಂದಾಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯ ನಿರ್ವಹಣಾಧಿಕಾರಿಯವರ ಗಮನ ಸೆಳೆದರು.
ಅಧ್ಯಕ್ಷರು ಗೈರುಹಾಜರಿ ಆಗಿರುವುದರಿಂದ ಅವರ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವವನ್ನು ರದ್ದುಪಡಿಸು ವಂತೆ ಸಭೆಯಲ್ಲಿ ಸದಸ್ಯರು ಒತ್ತಾಯ ಮಾಡಿದರು.
ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣನವರು ಮಾತನಾಡಿ, ಅಧ್ಯಕ್ಷರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳು ಕಳಪೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅವರ ಸೂಚನೆಯಂತೆ ಇಂದು ಸಭೆಯನ್ನು ಕರೆಯಲಾಗಿದೆ ಅದರನ್ವಯ ಸಭೆಯ ಸದಸ್ಯರ ಅಭಿಪ್ರಾಯವನ್ನು ತಿಳಿದು ಕೊಳ್ಳುವ ಮೂಲಕ ಸಂಪೂರ್ಣವಾದ ಮಾಹಿತಿ ಯನ್ನು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೇಗೌಡ, ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್, ರತ್ನಮ್ಮ, ರವಿ, ಗಿರೀಶ್, ಜಯಶ್ರೀ, ಪಲ್ಲವಿ, ಲಕ್ಷಿö್ಮ, ವಾಣಿ, ಚಂದ್ರು, ಸೇರಿದಂತೆ ಅಭಿವೃದ್ಧಿ ಅಧಿಕಾರಿ ಅಂಜಲಾದೇವಿ, ಕಾರ್ಯದರ್ಶಿ ಪುನಿತ್ ಹಾಜರಿದ್ದರು.