ಶನಿವಾರಸAತೆ, ಮಾ. ೨೮: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಸೋಮವಾರ ಸಂಜೆ ರಾಮ ನವಮಿ ಪ್ರಯುಕ್ತ ಶ್ರೀರಾಮ, ಸೀತಾ, ಲಕ್ಷö್ಮಣ, ಆಂಜನೇಯ ಮೂರ್ತಿಗಳಿಗೆ ಗಂಧದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಧಾನ ಅರ್ಚಕ ಕೆ.ಎಸ್. ಪ್ರಸನ್ನ ಭಟ್ ಹಾಗೂ ಅರ್ಚಕ ಸುದರ್ಶನ ಭಟ್ ದೇವರಿಗೆ ಶೋಡಷೋಪಚಾರ ಪೂಜೆ, ಅರ್ಚನೆ ಹಾಗೂ ಅಷ್ಟವಧಾನ ಸೇವೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿದರು.ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು. ಶ್ರೀರಾಮ ಮಂದಿರ ಸೇವಾ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷರು, ಸರ್ವ ಸದಸ್ಯರು ಹಾಜರಿದ್ದರು.