ಮಡಿಕೇರಿ, ಮಾ. ೨೮: ಮಡಿಕೇರಿ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಸಮಿತಿ ವತಿಯಿಂದ ಆಯೋಜನೆಗೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ಶೃತಿಲಯ ಕಲಾ ತಂಡದಿAದ ಸೋಮವಾರ ವೃಂದ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಮಡಿಕೇರಿಯ ರಾಮ್ ಸ್ವರೂಪ್ ಹೊಳ್ಳ ತಬಲಾ ಸಾಥ್ ನೀಡಿದರು. ಕೃಷ್ಣ ಗೋಪಾಲ್ ಕೊಳಲು ನುಡಿಸಿದರು.