ಮಡಿಕೇರಿ, ಮಾ.೨೯; ಮುಸಲ್ಮಾನರಿಗಾಗಿ ಮೀಸಲಿದ್ದ ೨ಬಿಯಲ್ಲಿನ ಶೇ.೪ರ ಮೀಸಲಾತಿಯನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮವನ್ನು ಕೊಡಗು ಮುಸ್ಲಿಂ ಅಸೋಸಿಯೇಶನ್ ಖಂಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ.ಹಸೈನಾರ್ ಹಾಜಿ; ಹಿಂದುಳಿದ ವರ್ಗಗಳ ಪ್ರವರ್ಗ ೨ಬಿ ಅಡಿಯಲ್ಲಿದ್ದ ಮುಸ್ಲಿಮರ ಶೇ.೪ಮೀಸಲಾತಿಯನ್ನು ಯಾವದೇ ವರದಿ ಪಡೆಯದೇ ರದ್ದು ಪಡಿಸಿರುವದು ಸರಕಾರದ ಸರ್ವಾಧಿಕಾರದ ಕ್ರಮವಾಗಿದೆ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಸಂವಿಧಾನದತ್ತವಾಗಿ ಮುಸಲ್ಮಾನರಿಗೆ ಮೀಸಲಿದ್ದ ಮೀಸಲಾತಿಯನ್ನು ಕಸಿದುಕೊಂಡು ಒಕ್ಕಲಿಗ ಹಾಗೂ ಲಿಂಗಾಯುತರಿಗೆ ಶೇ.೨ರಂತೆ ಹಂಚಿಕೆ ಮಾಡಿರುವದು ಸರಿಯಾದ ಕ್ರಮವಲ್ಲ. ನಮಗಿದ್ದ ಮೀಸಲಾತಿಯನ್ನು ಹೆಚ್ಚಳ ಮಾಡಿ ಅವರುಗಳಿಗೆ ಇನ್ನೂ ಹೆಚ್ಚಿನ ಮೀಸಲಾತಿ ನೀಡಬೇಕಾಗಿತ್ತು. ಅವರುಗಳಿಗೆ ನೀಡಿರುವದಕ್ಕೆ ಯಾವದೇ ವಿರೋಧವಿಲ್ಲ. ಇದರಿಂದ ಅವರುಗಳಿಗೂ ಯಾವದೇ ಪ್ರಯೋಜನವಾಗುವದಿಲ್ಲ ಎಂದು ಹೇಳಿದರು.

ಕಾರ್ಯಾಧ್ಯಕ್ಷ ಪಿ.ಎಂ.ಖಾಸಿA ಮಾತನಾಡಿ; ದೇವೇಗೌಡರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಈ ಮೀಸಲಾತಿಯಿಂದ ಸಾಕಷ್ಟು ಅನುಕೂಲವಾಗಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ರದ್ದು ಮಾಡಿ ಮುಸ್ಲಿಂ, ಒಕ್ಕಲಿಗ, ಲಿಂಗಾಯತರ ನಡುವೆ ಘರ್ಷಣೆ ಆಗುವಂತೆ ಮಾಡುವದು ಬಿಜೆಪಿ ಸರಕಾರದ ಉದ್ದೇಶವಾಗಿದೆ. ಶಾಂತಿ ಪ್ರಿಯರಾದ ನಾವುಗಳು ಬೀದಿಗಿಳಿದಿಲ್ಲ ಎಂದು ಹೇಳಿದರು. ದೇಶದಲ್ಲಿ ಮಿನಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ವಾಕ್ ಸ್ವಾತಂತ್ರö್ಯವಿಲ್ಲದAತಾಗಿದೆ, ಮಾಧ್ಯಮಗಳಿಗೂ ಸ್ವಾತಂತ್ರö್ಯವಿಲ್ಲ ವಾಗಿದೆ. ಇಂತಹ ದಮನ ನೀತಿಯನ್ನು ಖಂಡಿಸುವದಾಗಿ ಹೇಳಿದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮಡಿಕೇರಿ ಮಾತನಾಡಿ; ಮುಸಲ್ಮಾನರಿಗೆ ಮೀಸಲಾತಿ ೧೯೯೦ರಲ್ಲಿ ವೈಜ್ಞಾನಿಕ ರೀತಿಯಲ್ಲಿ ಆಗಿದೆ. ಪರಿಶಿಷ್ಟರಿಗಿಂತಲೂ ಹಿಂದುಳಿದಿರುವ ಶೇ.೧೪.ರಷ್ಟಿರುವ ಸಮುದಾಯದವರ ಪೈಕಿ ಶೇ.೨.೫ರಷ್ಟು ಮಂದಿ ಸರಕಾರಿ ಹುದ್ದೆಯಲ್ಲಿದ್ದಾರೆ. ಇನ್ನುಳಿದವರು ಬಡವರ್ಗದವರಾಗಿದ್ದು, ಹಾಗಾಗಿ ಶೈಕ್ಷಣಿಕ, ಆರ್ಥಿಕ ಅನುಕೂಲತೆಗಾಗಿ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿರುವದು ಸರಿಯಲ್ಲ. ಬಿಜೆಪಿಯವರನ್ನು ಸಂತುಷ್ಟಗೊಳಿಸಲು ಈ ರೀತಿ ಮಾಡಲಾಗಿದೆ ಎಂದರು.

ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ನಾಪೋಕ್ಲು ಮಾತನಾಡಿ; ಬಿಜೆಪಿಯ ದುರುದ್ದೇಶದಿಂದ ಮೀಸಲಾತಿ ರದ್ದುಪಡಿಸಲಾಗಿದೆ. ಮೀಸಲಾತಿ ಯಿಂದ ಶೈಕ್ಷಣಿಕ, ಔದ್ಯೋಗಿಕವಾಗಿ ಮುಂದೆ ಬರಲು ಅವಕಾಶವಿತ್ತು. ಸ್ಪರ್ಧಾತ್ಮಕ ಯುಗದಲ್ಲಿ ಬಡವರಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗುವದಿಲ್ಲ. ಮೀಸಲಾತಿಯನ್ನು ಕಿತ್ತುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು.

ಕೆ.ಪಿ.ಸಿ.ಸಿ.ವಕ್ತಾರ ಟಿ.ಎಂ. ಶಾಹಿದ್ ಮಾತನಾಡಿ; ಮುಸ್ಲಿಂ ಸಮುದಾಯ ಎಲ್ಲರೊಂ ದಿಗೂ ಹೊಂದಾಣಿಕೆ ಮಾಡಿಕೊಂಡು, ಗೌರವಿಸುವ ಸಮುದಾಯವಾಗಿದೆ. ಇದೀಗ ಚುನಾವಣೆ ದೃಷ್ಟಿಯಿಂದ ಮೀಸಲಾತಿ ರದ್ದು ಮಾಡಿರುವದರಿಂದ ಬಿಜೆಪಿಗೆ ಬಹುಮತ ಬರುವದಿಲ್ಲ. ಸಮುದಾಯವನ್ನು ಬೇರೆ ಬೇರೆ ರೀತಿಯಲ್ಲಿ ಅವಮಾನಿಸಲು ಪ್ರಯತ್ನಿಸಲಾಗುತ್ತಿದೆ. ಆರ್‌ಎಸ್‌ಎಸ್‌ನ ಯೊಜನೆಯಂತೆ ಭಾರತವನ್ನು ಹಿಂದೂ ರಾಷ್ಟçವನ್ನಾಗಿ ಕಾರ್ಯಗತಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಂವಿಧಾನದ ಆಶಯದಂತೆ ಎಲ್ಲರಿಗೂ ಅವಕಾಶ ಸಿಗಲಿ, ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡಬಾರದೆಂದು ಹೇಳಿದರು.

ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್ ಇದ್ದರು.