ಕುಶಾಲನಗರ, ಮಾ. ೨೮: ಕುಶಾಲನಗರದ ಹಿರಿಯ ಪತ್ರಿಕಾ ವಿತರಕ ವಿ.ಪಿ.ಪ್ರಕಾಶ್ ಅವರು ತಮಗೆ ಕೆಲವು ಸಮಯ ಹಿಂದೆ ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ಗಣಪತಿ ದೇವಾಲಯಕ್ಕೆ ಅರ್ಪಿಸಿದ್ದಾರೆ.
ಉಂಗುರ ಸಿಕ್ಕ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿದರೂ ಉಂಗುರ ಕಳೆದುಕೊಂಡವರು ಬಾರದೇ ಇದ್ದ ಕಾರಣ ಅಂದಾಜು ರೂ ೧೫ ಸಾವಿರಕ್ಕೂ ಅಧಿಕ ಮೌಲ್ಯದ ಉಂಗುರವನ್ನು ಗಣಪತಿ ದೇವಾಲಯದ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಅವರ ಮೂಲಕ ದೇವರಿಗೆ ಅರ್ಪಿಸಿದರು..