ಗೋಣಿಕೊಪ್ಪಲು, ಮಾ. ೨೯: ಹಲವು ಪ್ರಶಸ್ತಿಗಳಿಗಿಂತಲೂ ನಾಗರಿಕರು ನೀಡಿದ ಸನ್ಮಾನ ಅತೀ ದೊಡ್ಡದಾಗಿದೆ. ಇದನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಮ್ಮ ಮನದಾಳದ ಅಭಿಪ್ರಾಯವನ್ನು ತಿಳಿಸಿದರು.

ಗೋಣಿಕೊಪ್ಪಲುವಿನ ಕೂರ್ಗ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಮಾರ್ಚ್ ೨೮ ರಂದು ಗೋಣಿಕೊಪ್ಪಲು ದಸರಾ ಸಮಿತಿ ಹಾಗೂ ೨೫ ಸಂಘ-ಸAಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಒಬ್ಬ ಸೇವಕನಾಗಿ ಕೆಲಸ ನಿರ್ವಹಿಸಿದ್ದೇನೆ ಎಂದರು.

ಉತ್ತಮ ಕೆಲಸವನ್ನು ಗುರುತಿಸಿ ನಾಗರಿಕರು ನೀಡಿದ ಸನ್ಮಾನ ಬೆಲೆ ಕಟ್ಟಲು ಸಾಧ್ಯವಿಲ್ಲ. ಗೋಣಿಕೊಪ್ಪ ದಸರಾ ಉತ್ಸವಕ್ಕೆ ನನ್ನ ಅವಧಿಯಲ್ಲಿ ಒಟ್ಟು ನಾಲ್ಕು ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ. ಇದರಿಂದ ದಸರಾ ಜನೋತ್ಸವ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರಲು ಸಹಾಯಕವಾಗಿದೆ ಎಂದು ವಿವರಿಸಿದರು.

ಗೋಣಿಕೊಪ್ಪಲುವಿನ ಹಿರಿಯ ವೈದ್ಯ ಡಾ. ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಬಿ.ಎನ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ದಸರಾ ಉತ್ಸವಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾದ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿ ದಸರಾ ಉತ್ಸವವನ್ನು ಯಾವುದೇ ಅಡತಡೆಗಳಿಲ್ಲದಂತೆ ನಡೆಸಲು ಮೂಲ ಕಾರಣಕರ್ತರಾಗಿದ್ದಾರೆ. ಇದರಿಂದ ನೂರಾರು ಪ್ರತಿಭೆಗಳಿಗೆ ದಸರಾ ವೇದಿಕೆಯು ಅನುಕೂಲ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಹಲವು ಸಂಘ-ಸAಸ್ಥೆಗಳ ಸಮ್ಮುಖದಲ್ಲಿ ನಾಗರಿಕರ ಸನ್ಮಾನವನ್ನು ಶಾಸಕರಿಗೆ ನೀಡಲಾಗಿದೆ ಎಂದರು.ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮಾತನಾಡಿ, ಗೋಣಿಕೊಪ್ಪ ನಗರದಲ್ಲಿ ಏಕಮುಖ ಸಂಚಾರದಿAದ ಇಲ್ಲಿನ ವರ್ತಕರು ಬಹಳಷ್ಟು ಕಷ್ಟವನ್ನು ಎದುರಿಸಿದ್ದರು. ಈ ವೇಳೆ ವರ್ತಕರ ಸಹಾಯಕ್ಕೆ ಶಾಸಕರು ಸ್ಪಂದಿಸುವ ಮೂಲಕ ರಸ್ತೆಗಳನ್ನು ಅಭಿವೃದ್ಧಿಪಡಿಸಿ ನಂತರ ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಇದರಿಂದ ವರ್ತಕರ ಬವಣೆ ನೀಗಿದಂತಾಗಿದೆ ಎಂದರು.

ಸಭೆಯಲ್ಲಿ ಅಕ್ರಮ-ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಸುಬ್ರಮಣಿ, ಇಗ್ಗುತ್ತಪ್ಪ ಕೊಡವ ಸಮಾಜದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ಅರ್ಚಕರ ಸಂಘದ ಪ್ರಭಾಕರ್ ನೆಲ್ಲಿತ್ತಾಯ, ಎಸ್‌ಎನ್‌ಡಿಪಿಯ ಸೂರ್ಯ ಸೇರಿದಂತೆ ಇನ್ನಿತರ ಸಂಘ-ಸAಸ್ಥೆಯ ಪ್ರಮುಖರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ವಿವಿಧ ದಸರಾ ಸಮಿತಿಯ ಪದಾಧಿಕಾರಿಗಳು, ಶಿವಾಜಿ ಸೇವೆಯ ಸಿಂಗಿ ಸತೀಶ್, ಚಿನ್ನ-ಬೆಳ್ಳಿ ವರ್ತಕರ ಸಂಘದ ಗಜಾನನ ಶೇಠ್, ಜಪ್ಪು ಸುಬ್ಬಯ್ಯ, ಸುರೇಶ್ ರೈ, ಸೇರಿದಂತೆ ಅನೇಕ ಸಂಘ-ಸAಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಶೀಲಾ ಬೋಪಣ್ಣ, ಸ್ವಾಗತಿಸಿ, ನಿರೂಪಿಸಿ, ಗೀತಾ ನಾಯ್ಡು ವಂದಿಸಿದರು.