ಕೂಡಿಗೆ, ಮಾ. ೨೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಮುನ್ನಾ ದಿನದಂದು ದೇವಾಲಯದ ಆವರಣದಲ್ಲಿ ಸೀತಕಲ್ಯಾಣೋತ್ಸವ ನಡೆಯಿತು.

ಇದರ ಅಂಗವಾಗಿ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ನವಗ್ರಹ, ಗಣಪತಿ ಹೋಮ, ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಸೀತಾ ಕಲ್ಯಾಣೋತ್ಸವವನ್ನು ಪ್ರಧಾನ ಆರ್ಚಕ ರಾಘವೇಂದ್ರ ಆಚಾರ್ ನೆರವೇರಿಸಿದರು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕಾರ್ಯದರ್ಶಿ ಶೇಷಾಚಲ, ಸಹ ಕಾರ್ಯದರ್ಶಿ ಮಹೇಶ್, ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ್, ಸೇರಿದಂತೆ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.