*ಗೋಣಿಕೊಪ್ಪ, ಮಾ. ೨೭: ಬೇಗೂರು ಬಳಪನಕೆರೆ ರಸ್ತೆ ಸಂಪರ್ಕ ಸಂಚಾರಕ್ಕೆ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಚಾಲನೆ ನೀಡಿದರು.
ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೇಗೂರು ರಸ್ತೆ ಸಮೀಪ ಗ್ರಾಮ ಸಡಕ್ ಯೋಜನೆಯ ರೂ. ೬.೫೦ ಕೋಟಿ ಅನುದಾನದಲ್ಲಿ ಮರು ಡಾಂಬರೀಕರಣಗೊAಡ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.
ಈ ಭಾಗದ ಜನ ರಸ್ತೆಗಾಗಿ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ದಿವಂಗತ ಸಾದು ಪೂಣಚ್ಚ ಅವರ ಪ್ರಯತ್ನದಿಂದ ಈ ಮಾರ್ಗದ ರಸ್ತೆ ಡಾಂಬರೀಕರಣ ವನ್ನು ಕಂಡಿತು.
ನಂತರ ಹಂತ ಹಂತವಾಗಿ ಉನ್ನತೀಕರಣಗೊಂಡ ರಸ್ತೆ, ಗ್ರಾಮ ಸಡಕ್ ಯೋಜನೆಯಲ್ಲಿ ಮರುಡಾಂಬರೀಕರಣಗೊAಡಿದೆ.
ಈ ರಸ್ತೆ ಅಭಿವೃದ್ಧಿಯ ಫಲಶ್ರುತಿ ಸಾದು ಪೂಣಚ್ಚನವರಿಗೆ ದಕ್ಕತಕ್ಕದ್ದು ಎಂದು ಶಾಸಕರು ಬಣ್ಣಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಕಾಲೋನಿ ರಸ್ತೆಗಳು ಕಾಂಕ್ರೀಟಿಕರಣಗೊAಡಿರುವ ಬಿಜೆಪಿ ಸರ್ಕಾರದಲ್ಲಿ ಮಾತ್ರ ಕಾಣತಕ್ಕದ್ದು ಎಂದು ಹೇಳಿದರು.
ತಾಲೂಕು ಉಪಾಧ್ಯಕ್ಷ ಚೋಡುಮಾಡ ಶ್ಯಾಮ್ ಪೂಣಚ್ಚ, ಬೂತ್ ಅಧ್ಯಕ್ಷ ಮಲ್ಲಂಡ ತಮ್ಮಿ, ಕಾರ್ಯದರ್ಶಿ ಚೋಡುಮಾಡ ವಿಕ್ರಂ, ಶಕ್ತಿ ಕೇಂದ್ರದ ಪ್ರಮುಖ್ ಕೇಚೆಟ್ಟಿರ ಅರುಣ್ ಅಪ್ಪಯ್ಯ, ಸಹಪ್ರಮುಖ್ ಕಿರಿಯಮಾಡ ಈಶ ಮಂದಣ್ಣ, ಪ್ರಮುಖದ ಮುಂಡಚಾಡಿರ ದಿನೇಶ್ ಚಿಟ್ಟಿಯಪ್ಪ, ದಾದು ಪೂವಯ್ಯ, ಆಲೀರ ಮಣಿ, ಉಸ್ಮಾನ್, ಮುಸ್ತಾಫ, ಗ್ರಾ.ಪಂ. ಸದಸ್ಯ ಪೊನ್ನಪ್ಪ, ವಿಶ್ಮತಂಗಮ್ಮ, ಪ್ರಿನ್ಸಿ ಕಾವೇರಿ, ಮಿಲನ್ಗಣಪತಿ ಸೇರಿದಂತೆ ಗ್ರಾಮಸ್ಥರು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಇದ್ದರು.