ಹೊದ್ದೂರು, ಮಾ. ೨೭: ಮೂರ್ನಾಡುವಿಗೆ ಸನಿಹದ ಹೊದ್ದೂರು ಪಂಚಾಯಿತಿ ವ್ಯಾಪ್ತಿಯ ಹೊದವಾಡ-ಕುಯ್ಯಂಗೇರಿ ಗ್ರಾಮದ ಭಗವತಿ ದೇಗುಲದ ಪುನರ್ ನವೀಕರಣಕ್ಕಾಗಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ೨ ಲಕ್ಷ ರೂಪಾಯಿ ಮೌಲ್ಯದ ಚೆಕ್ಕ್ ಅನ್ನು ವಿತರಿಸಲಾಯಿತು.
ಧರ್ಮಸ್ಥಳ ಸೇವಾ ಸಮಿತಿಯ ಜಿಲ್ಲಾ ನಿರ್ದೆಶಕಿ ಲೀಲಾವತಿ ದೇವಳ ಸಮಿತಿಯ ಅಧ್ಯಕ್ಷ ಆಚೇಡ ಅರುಣ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಮಡಿಕೇರಿ ತಾಲೂಕು ಯೋಜನಾಧಿಕಾರಿ ದಿನೇಶ್, ವಲಯ ಮೇಲ್ವಿಚಾರಕ ಪ್ರತಾಪ್, ಹೊದ್ದೂರು ಒಕ್ಕೂಟ ಸಮಿತಿಯ ಸೇವಾ ಪ್ರತಿನಿಧಿ ಮಮ್ತಾಜ್, ಅಧ್ಯಕ್ಷೆ ಚೆಟ್ಟಿಮಾಡ ನಿವ್ಯಾ ಅವಿನಾಶ್, ಉಪಾಧ್ಯಕ್ಷೆ ಹಂಸಾವತಿ, ಕೋಶಾಧಿಕಾರಿ ಚೌರೀರ ಅನಿತಾ, ಸದಸ್ಯರುಗಳಾದ ತಂಸೀನಾ ಬಾನು, ಚೆಟ್ಟಿಮಾಡ ಲಕ್ಷಣ, ಲೋಹಿತ್ ದೇವಾಲಯ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.