ವೀರಾಜಪೇಟೆ, ಮಾ. ೨೮ : ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸ್ ಡಿ. ರಾಜಾ ಅವರಿಗೆ ೨೦೨೨ರ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ರಾಜ್ಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಪ್ರತಿಷ್ಠಿತ ಮುಖ್ಯಮಂತ್ರಿ ಪೋಲಿಸ್ ಪದಕ ನೀಡಲಾಗುತ್ತಿದ್ದು ಈ ಬಾರಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಡಿ ರಾಜಾ ಅವರಿಗೆ ವಿಶೇಷ ಕರ್ತವ್ಯ ನಿಮಿತ್ತ ಈ ಪ್ರಶಸ್ತಿ ಸಂದಿದೆ. ಮಧುರೈ ಮೂಲದ ದೊರೈಪಾಂಡಿಯನ್ ಮತ್ತು ಪಂಚವರ್ಣA ಅವರ ಪುತ್ರ ಡಿ. ರಾಜಾ ಅವರು ಪಾಲಿಬೆಟ್ಟದಲ್ಲಿ ಹುಟ್ಟಿ ಬೆಳೆದು ೨೦೦೯ ರಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ಸಿದ್ದಾಪುರ ಹಾಗೂ ಪೊನ್ನಂಪೇಟೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿ ಪ್ರಸ್ತುತ ವೀರಾಜಪೇಟೆಯ ಗ್ರಾಮಾಂತರ ಠಾಣೆ ಪೊಲೀಸ್ ಕಾನ್ಸೆ÷್ಟÃಬಲ್ ಆಗಿ ನಿಯೋಜನೆಗೊಂಡಿದ್ದು ಪ್ರಸ್ತುತ ವಿಶೇಷ ಘಟಕದಲ್ಲಿ ಗುಪ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ.