ವೀರಾಜಪೇಟೆ, ಮಾ. ೨೭: ಸಮುದಾಯಿಕ ಸಂಘಟನೆಗಳು ಒಗ್ಗಟ್ಟಿನಿಂದ ಮುನ್ನಡೆದರೆ ಸಮುದಾಯದ ಜನತೆಗೆ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ ಎಂದು ಬಂಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಭಾನುವಾರ ನಡೆದ ಬಂಟರ ಸಂಘದ ತಾಲೂಕು ಘಟಕದ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ವಿದ್ಯಾರ್ಥಿಗಳು ಸೇರಿದಂತೆ ಜನಾಂಗದ ಅಭಿವೃದ್ಧಿಗೆ ಸಂಘಟನೆಯು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕಾನೂನುಬದ್ಧವಾಗಿ ವ್ಯವಸ್ಥಿತವಾಗಿ ನಡೆಯುವ ಸಂಘಟನೆಗಳು ಹೆಚ್ಚಿನ ವಿಶ್ವಸಾರ್ಹತೆಗೆ ಪಾತ್ರವಾಗುತ್ತದೆ. ತಾಲೂಕು ಸಮಿತಿಗಳಿಗೆ ಜಿಲ್ಲಾ ಸಂಘಟನೆಯಿAದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ. ದುಶ್ಯಂತ್ ರೈ, ಬಂಟರ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಐತಪ್ಪ ರೈ, ತಾಲೂಕು ಘಟಕದ ಮಾಜಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೂತನ ಆಡಳಿತ ಮಂಡಳಿಯ ಆಯ್ಕೆ

ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆದು ನೀಲಿಮಾಡುವಿನ ಲೀಲಾಧರ ರೈ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ದುಶ್ಯಂತ್ ರೈ ನೀಲಿಮಾಡು ಹಾಗೂ ತಾಲೂಕು ಘಟಕದ ಮಾಜಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಕಾಶ್ ರೈ ಹಾಗೂ ರವೀಂದ್ರ ರೈ, ಕಾರ್ಯದರ್ಶಿಯಾಗಿ ಎಂ.ಆರ್. ಸಂಪತ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ನೀತು ರೈ ಹಾಗೂ ಜಗದೀಶ್ ರೈ, ಖಜಾಂಚಿಯಾಗಿ ಮದನ್ ಶೆಟ್ಟಿ ಮತ್ತು ನಿರ್ದೇಶಕರಾಗಿ ಶಶಿಕಲಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಸಭೆಯಲ್ಲಿ ಜಿಲ್ಲಾ ಸಮಿತಿಯ ರಮೇಶ್ ರೈ, ಬಿ.ಕೆ. ಸತೀಶ್ ರೈ, ಶರತ್ ಶೆಟ್ಟಿ, ಬಾಲಕೃಷ್ಣ ರೈ, ಮನೋಜ್ ರೈ, ಸುರೇಶ್ ರೈ, ಸುದೀಶ್ ರೈ, ಸತೀಶ್ ರೈ ಕೈಕೇರಿ, ಸೀತಾರಾಂ ರೈ ಮತ್ತಿತರರು ಇದ್ದರು.

ಹೇಮಂತ್ ಶೆಟ್ಟಿ ನಿರೂಪಿಸಿದರು. ಜಿಲ್ಲಾ ಸಮಿತಿಯ ಕಿಶೋರ್ ರೈ ಕತ್ತಲೆಕಾಡು ಅವರು ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಸಿ, ವಂದಿಸಿದರು.