ನಾಪೋಕ್ಲು, ಮಾ. ೨೮: ಸಮೀಪದ ಕೈಕಾಡು ಗ್ರಾಮದ ಬಸ್ ತಂಗದಾಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಮೂವರನ್ನು ಬಂದಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳವಾರ ಸಂಜೆ ಅಸ್ಸಾಂ ನಿವಾಸಿಗಳಾದ ಸೈಫುಲ್ ಇಸ್ಲಾಂ(೨೭), ಜಹರ್ ಆಲಿ (೨೭) ಹಾಗೂ ಅನರ್ ಹುಸೇನ್ (೩೭)ಮೂವರು ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳಿಂದ ೩.೫ ಲಕ್ಷ ರೂ. ಮೌಲ್ಯದ ೨ ಕೆ.ಜಿ. ೧೦೦ ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು ಮೂವರನ್ನು ಬಂದಿಸಿ ಕಾನೂನು ಕ್ರಮಕೈಗೊಂಡಿದ್ದಾರೆ. ಆರೋಪಿಗಳು ಕಡಂಗದ ಮೊಹಮ್ಮದ್ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳಿಂದ ೩.೫ ಲಕ್ಷ ರೂ. ಮೌಲ್ಯದ ೨ ಕೆ.ಜಿ. ೧೦೦ ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು ಮೂವರನ್ನು ಬಂದಿಸಿ ಕಾನೂನು ಕ್ರಮಕೈಗೊಂಡಿದ್ದಾರೆ. ಆರೋಪಿಗಳು ಕಡಂಗದ ಮೊಹಮ್ಮದ್ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜಗದೀಶ್ ಅವರ ನೇತೃತ್ವದಲ್ಲಿ, ಠಾಣಾಧಿಕಾರಿ ಮಂಜುನಾಥ, ಸಿಬ್ಬಂದಿಗಳಾದ ಶಿವಪ್ರಸಾದ್, ಹರ್ಷ, ಶಮಿಲ್, ಶರತ್ ಕುಮಾರ್, ಪಂಚಲಿAಗಪ್ಪ, ರವಿಕುಮಾರ್, ಮಧುಸೂದನ್ ವೆಂಕಟೇಶ್, ಮಹೇಶ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ದುಗ್ಗಳ