ಮಡಿಕೇರಿ, ಮಾ. ೨೭: ಕಕ್ಕಬೆ ಅಮ್ಮಂಗೇರಿ ಶ್ರೀ ಪುದಿಯೋದಿ ದೇವಿಯ ವಾರ್ಷಿಕ ಉತ್ಸವ ತಾ. ೩೦ ರಿಂದ ನಡೆಯಲಿದೆ.
ತಾ. ೩೦ ರಂದು ಸಂಜೆ ೬.೪೦ಕ್ಕೆ ಗುರುಮನೆಯಿಂದ ಭಂಡಾರ ಇಳಿಯುವುದು, ೮ ಗಂಟೆಗೆ ಅನ್ನದಾನ, ೧೦ ಗಂಟೆಗೆ ಶ್ರೀ ಪುದಿಯೋದಿ ದೇವಿಯ ತೋತ, ೧೦.೩೦ಕ್ಕೆ ಮೇಲೇರಿ ಅಗ್ನಿಸ್ಪರ್ಶ, ೧೧ ಕ್ಕೆ ಶ್ರೀ ಬೀರದೇವರ ತೋತ, ರಾತ್ರಿ ೧ಕ್ಕೆ ಶ್ರೀ ಪುದಿಯೋದಿ ದೇವಿಯ ತೋತ, ೨ಕ್ಕೆ ಬೀರದೇವರ ಕೋಲ, ೪ಕ್ಕೆ ಬೀರಾಳಿ ದೇವಿಯ ಕೋಲ ನಡೆಯಲಿದೆ.
ತಾ. ೩೧ ರಂದು ಬೆಳಿಗ್ಗೆ ೬ ಗಂಟೆಗೆ ಶ್ರೀ ಪುದಿಯೋದಿ ದೇವಿಯ ಕೋಲ, ೯ ಗಂಟೆಗೆ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಲಿದೆಯೆಂದು ಕೋಲೆಯಂಡ ಕುಟುಂಬ ಟ್ರಸ್ಟ್ ಅಧ್ಯಕ್ಷ ಕೋಲೆಯಂಡ ಗಿರೀಶ್ ತಿಳಿಸಿದ್ದಾರೆ