ಭಾಗಮಂಡಲ, ಮಾ. ೨೭: ಭಾಗಮಂಡಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾಭವನವನ್ನು ರೂ. ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸ ಲಾಗಿದ್ದು ಇದರ ಭೂಮಿ ಪೂಜೆಯನ್ನು ಬ್ಯಾಂಕಿನ ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್ ನೆರವೇರಿಸಿದರು. ಉಪಾಧ್ಯಕ್ಷ ನಂಜುAಡಪ್ಪ, ಮಾಜಿ ಅಧ್ಯಕ್ಷರಾದ ರವಿ ಹೆಬ್ಬಾರ್, ನಿಡ್ಯಮಲೆ ರವಿ, ಕುದುಪಜೆ ದಾಸಪ್ಪ, ಅಮೆ ಸುಂದರೇಶ್, ಎನ್. ಬಾಲಾಜಿ, ಬ್ಯಾಂಕಿನ ವ್ಯವಸ್ಥಾಪಕ ಜಗನ್ನಾಥ್ ಹಾಗೂ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು.