*ಗೋಣಿಕೊಪ್ಪ, ಮಾ. ೨೮: ಬೈಪಾಸ್ ಹಾಗೂ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೂ. ೨೦ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ನೂತನ ಸೇತುವೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.

ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ರಿಬ್ಬನ್ ಕತ್ತರಿಸುವ ಮೂಲಕ ಸೇತುವೆ ಸಂಚಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗೋಣಿಕೊಪ್ಪ ಕೀರೆ ಹೊಳೆ ಅಭಿವೃದ್ಧಿಗೆ ಏಳು ಕೋಟಿ ಅನುದಾನವನ್ನು ನೀಡಲಾಗಿದೆ.

ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಕಾಮಗಾರಿ ಪ್ರಾರಂಭವಾಗಲಿದ್ದು, ಕೆರೆ ಹೊಳೆ ಹರಿವ ಮಾರ್ಗದಲ್ಲಿ ಕುಸಿದು ಬಿದ್ದ ಭಾಗಗಳನ್ನು ಪರಿಶೀಲಿಸಿ ಪ್ರಥಮವಾಗಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.

ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೌಮ್ಯ ಬಾಲು, ಸದಸ್ಯರುಗಳಾದ ಚೈತ್ರ ಬಿ. ಚೇತನ್, ರತಿ ಅಚ್ಚಪ್ಪ, ಬಿ.ಎನ್. ಪ್ರಕಾಶ್, ಕೋಣಿಯಂಡ, ಬೋಜಮ್ಮ, ರಾಮಕೃಷ್ಣ ಕೆ.ಜಿ., ರಾಜೇಶ್ ಕೆ., ವಿವೇಕ್ ರಾಯ್ಕರ್, ಗೀತಾ, ಪುಷ್ಪ ಮನೋಜ್, ಹಕೀಮ್, ರಾಮ್‌ದಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ನೂರೇರ ರಂಜಿ, ಮಂಜು, ಸಿ.ಕೆ. ಬೋಪಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು.