ಮಡಿಕೇರಿ, ಮಾ. ೨೮: ಬೇಗೂರು ಗ್ರಾಮದ ಪಟ್ಟಗೇರಿ ಅಂಬಲ ಒಕ್ಕೂಟದ ೯ನೇ ವರ್ಷದ ವಾರ್ಷಿಕ ಸಭೆಯು ಬೇಗೂರು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷ ಮಂತ್ರಡ ರಾಜ ಮುತ್ತಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪಟ್ಟಗೇರಿಗೆ ಸೇರಿದ ಕುಟುಂಬದ ಸದಸ್ಯರು ಸೇರಿ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಒಕ್ಕೂಟವನ್ನು ಅಭಿವೃದ್ಧಿಪಡಿಸುವ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬೆಂಜಾAಡ ಬಿಂಬಿಕ ಬೋಜಮ್ಮ ಪ್ರಾರ್ಥನೆ ಮಾಡಿದರು. ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.