*ಗೋಣಿಕೊಪ್ಪ, ಮಾ. ೨೭: ಹೊಸೂರು ಪಂಚಾಯಿತಿ ಮತ್ತು ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ನರೇಗಾದಡಿಯಲ್ಲಿ ರೂ. ೯.೩೨ ಲಕ್ಷದಲ್ಲಿ ಹೊಸೂರು ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದ್ದು, ಹುದಿಕೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್.ಐ.ಡಿ.ಎಫ್. ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದ ಬಳಕೆಯೊಂದಿಗೆ ಸುಮಾರು ರೂ. ೧೬ ಲಕ್ಷದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ರಾಜೇಶ್, ಹೊಸೂರು ಪಂಚಾಯಿತಿ ಅಧ್ಯಕ್ಷೆ ಪಂದ್ಯAಡ ಶಾಂತಿ ಸೋಮಯ್ಯ, ಸದಸ್ಯರುಗಳಾದ ಸಣ್ಣುವಂಡ ರತ್ನ ಸುಬ್ಬಯ್ಯ, ಪಿ. ವಿಶಾಲಾಕ್ಷಿ, ಟಿ.ಎನ್. ಮಹಾದೇವ್, ಎಂ.ಎನ್. ಮಾದಯ್ಯ, ಪಿ.ವಿ. ಪ್ರಕಾಶ್, ವೈ.ಎಂ. ಸುಮಾ, ಹೆಚ್.ಆರ್. ಮಹೇಶ್ವರಿ, ಕೆ.ಎಂ. ಸುಶೀಲಾ, ಪಿ.ಎ. ಲಕ್ಷಿ÷್ಮ, ಹೆಚ್.ಎಸ್. ಮಧು. ಪಿ.ಡಿ.ಓ. ಎಂ.ಡಿ. ಶ್ರೀನಿವಾಸ್, ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್, ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್, ಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಪೊಡಂಗಡ ವಾಸು ಬಿದ್ದಪ್ಪ, ಸದಸ್ಯೆ ಕುಪ್ಪಣಮಾಡ ಕಾವೇರಮ್ಮ, ಅಂಗನವಾಡಿ ತಾಲೂಕು ಅಧ್ಯಕ್ಷೆ ಸುಮಿತ್ರ, ಕಾರ್ಯಕರ್ತೆಯರು, ಸಹಾಯಕಿಯರು, ಸ್ಥಳೀಯ ಗ್ರಾಮಸ್ಥರು ಇದ್ದರು.