*ಗೋಣಿಕೊಪ್ಪ, ಮಾ. ೨೭: ಹಾತೂರು ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ರೂ. ೨೮ ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಮ್ಮಟೀರ ದರ್ಶನ ನಂಜಪ್ಪ ಹಾಗೂ ಸರ್ವ ಸದಸ್ಯರು ಹಾಜರಿದ್ದರು.
ನಂತರ, ಕುಂದ ಗ್ರಾಮದಲ್ಲಿ ರೂ. ೪೧.೫೮ ಲಕ್ಷದಲ್ಲಿ ೫೧ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಮತ್ತು ೨೦ ಸಾವಿರ ಲೀಟರ್ ನೀರಿನ ಟ್ಯಾಂಕ್, ಅತ್ತೂರು ಗ್ರಾಮದಲ್ಲಿ ರೂ. ೯೩.೩೩ ಲಕ್ಷದಲ್ಲಿ ೨೨೦ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಹಾಗೂ ೫೦ ಸಾವಿರ ಲೀಟರ್ ಸಾಮಾರ್ಥ್ಯದಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ಟ್ಯಾಂಕನ್ನು ಉದ್ಘಾಟಿಸಲಾಯಿತು.
ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಕುಲ್ಲಚಂಡ ಚಿಣ್ಣಪ್ಪ, ಕುಪ್ಪಂಡ ಪೂವಣ್ಣ, ಸಣ್ಣುವಂಡ ಅಕ್ಕಮ್ಮ ಉತ್ತಪ್ಪ, ಸುಮಾ, ಸುಮಿತ ಎಂ.ಎA., ಜೆ.ಎ. ವಿಷ್ಮ, ಸುಭಾಷ್ ಮ್ಯಾಥ್ಯು, ಬಿ.ಪಿ. ರೇಖಾ, ಸುಮಿತ್ರ ಜಿ., ಪಿ.ಯು. ರತಿ, ಪಿ.ಎ. ಮುತ್ತುರಾಜ್, ಹೆಚ್.ಆರ್. ಪೊನ್ನಮ್ಮ, ನಮಿತ, ಕೊಕ್ಕಂಡ ಗಣಪತಿ, ಜಿ.ಟಿ. ಭೀಮಯ್ಯ, ಬೋಜಿ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯೋಗೇಶ್ ಗೌಡ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.