ಮಡಿಕೇರಿ, ಮಾ. ೨೭: ಇಲ್ಲಿನ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೊಡಗಿನ ಕ್ರೀಡಾಲೋಕದ ಭೀಷ್ಮ ಎಂದೇ ಕರೆಯಲ್ಪಡುವ ದಿ. ಸಿ.ವಿ. ಶಂಕರ್ ಸ್ವಾಮಿ ಸ್ಮಾರಕ ನಡೆಸಿಕೊಂಡು ಬರುತ್ತಿರುವ ೨೯ನೇ ಉಚಿತ ಬೇಸಿಗೆ ಕ್ರೀಡಾ ಶಿಬಿರ ಇಂದಿನಿAದ ಆರಂಭಗೊAಡಿದೆ.
ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊAಡ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಶಿಬಿರದ ಸಂಚಾಲಕ ಬಾಬು ಸೋಮಯ್ಯ, ಕಿರುಂದAಡ ಗಣೇಶ್, ಬೊಪ್ಪಂಡ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್ ಅವರುಗಳು ಮಾರ್ಗ ದರ್ಶನದೊಂದಿಗೆ ಪ್ರಾಣಾಯಾಮ, ವ್ಯಾಯಾಮಗಳನ್ನು ಹೇಳಿಕೊಟ್ಟರು.
ಏ.೧ರಂದು ಉದ್ಘಾಟನೆ
ಮಕ್ಕಳಲ್ಲಿನ ಮಾನಸಿಕ ಅಸಮತೋಲನ ಹೋಗಲಾಡಿಸಿ, ಮಾನಸಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕಳೆದ ೨೯ ವರ್ಷಗಳಿಂದ ಉಚಿತವಾಗಿ ಶಿಬಿರ ಏರ್ಪಡಿಸಿ ಕೊಂಡು ಬರಲಾಗುತ್ತಿದೆ. ಪ್ರಾಣಾಯಾಮ, ವ್ಯಾಯಾಮ, ಹಾಕಿ ಹಾಗೂ ಅಥ್ಲೆಟಿಕ್ಸ್ನಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವದು. ಭಾಗವಹಿಸುವ ಮಕ್ಕಳಲ್ಲಿ ಪೋಷಕಾಂಶ ತುಂಬುವ ನಿಟ್ಟಿನಲ್ಲಿ ವಿಟಮಿನ್‌ಯುಕ್ತ ಲಘು ಉಪಾಹಾರ ನೀಡಲಾಗುತ್ತದೆ. ರಜೆ ಇರುವದರಿಂದ ಮಕ್ಕಳು ಮೈದಾನಕ್ಕೆ ಬರಲಿ ಎಂಬ ಉದ್ದೇಶದಿಂದ ಇಂದಿನಿAದಲೇ ಶಿಬಿರ ಆರಂಭಿಸಲಾಗಿದ್ದು, ಇದರ ಉದ್ಘಾಟನೆ ಶಂಕರ್ ಸ್ವಾಮಿ ಅವರ ಜನ್ಮ ದಿನವಾದ ಏ.೧ರಂದು ನಡೆಯಲಿದೆ. ನಂತರ ಒಂದು ತಿಂಗಳ ಕಾಲ ಶೀಬಿರ ನಡೆಯಲಿದೆ. ಕೊನೆಯಲ್ಲಿ ಒಂದು ದಿವಸ ಮಕ್ಕಳನ್ನು ಚಾರಣ ಕರೆದುಕೊಂಡು ಹೋಗಲಾಗುವದು. ಪೋಷಕರೂ ಈ ಚಾರಣದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದಲ್ಲಿ ತಮ್ಮೊಂದಿಗೆ ಮುದ್ದಯ್ಯ, ಬಾಬು ಸೋಮಯ್ಯ, ಶಾಂ ಪೂಣಚ್ಚ, ಗಣೇಶ್, ಕುಡೆಕಲ್ ಸಂತೋಷ್, ಅಶೋಕ್ ನಾಯ್ಡು ಅವರುಗಳು ತರಬೇತಿ ನೀಡುತ್ತಿದ್ದಾರೆ ಎಂದು ವಾಂಡರ‍್ಸ್ ತರಬೇತುದಾರ, ಶಿಕ್ಷಕ ಎಸ್.ಟಿ.ವೆಂಕಟೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಒಂದು ತಿಂಗಳಲ್ಲಿ ಮಕ್ಕಳನ್ನು ಸಾಕಷ್ಟು ತರಬೇತುಗೊಳಿಸಲಾಗುವದು. ಈ ಶಿಬಿರದಲ್ಲಿ ಭಾಗವಹಿಸಿದ್ದ ಪೈಕೇರ ಕಾಳಯ್ಯ, ಎಂ.ಎಸ್. ಮೊಣ್ಣಪ್ಪ, ಎ.ಬಿ.ಸುಬ್ಬಯ್ಯ, ಪಾರ್ಥ, ಮುದ್ದಯ್ಯ, ಬಿ.ಸಿ.ಪೂಣಚ್ಚ, ಅಮರ್ ಅಯ್ಯಮ್ಮ, ವಿ.ಎಸ್. ವಿನಯ್, ಗಣೇಶ್ ಹೀಗೆ ಹಲವಾರು ಮಂದಿ ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಹಾಗೂ ಒಲಂಪಿಕ್‌ನಲ್ಲಿ ಆಟವಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಂದಿ ಕ್ರೀಡಾಶಾಲೆಗೆ ಸೇರ್ಪಡೆ ಗೊಂಡು ರಾಜ್ಯ, ರಾಷ್ಟç ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ ಎಂದು ತಿಳಿಸಿದರು.
ಸ್ವ ಇಚ್ಛೆಯಿಂದ ತರಬೇತಿ
ಕ್ಲಬ್‌ನ ನಿರ್ದೇಶಕ ಬೊಪ್ಪಂಡ ಶಾಂ ಪೂಣಚ್ಚ ಮಾತನಾಡಿ; ಮಕ್ಕಳಲ್ಲಿ ಶಿಸ್ತು ಮೂಡಿಸುವ ಸಲುವಾಗಿ, ಬೆಳಿಗ್ಗೆ ಬೇಗನೇ ಎದ್ದು ಮೈದಾನಕ್ಕೆ ಬರುವಂತಾಗಲು ಶಿಬಿರ ಸಹಕಾರಿಯಾಗಲಿದೆ. ಮಕ್ಕಳು ಹಾಗೂ ಪೋಷಕರು ಪ್ರೀತಿಯಿಂದ ಶಿಬಿರಕ್ಕೆ ಬರುತ್ತಾರೆ. ಒಂದು ತಿಂಗಳಲ್ಲಿ ಕನಿಷ್ಟ ೨೦೦ ಮಂದಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ತರಬೇತುದಾರರು ಕೂಡ ಎಲ್ಲರೂ ಯಾವದೇ ಹಣ ಪಡೆಯದೇ ಸ್ವ ಇಚ್ಛೆಯಿಂದ ಪ್ರತಿದಿನ ಆಗಮಿಸಿ ತರಬೇತಿ ನೀಡುತ್ತಾರೆ. ಕ್ರೀಡಾಭಿಮಾನಿಗಳು ಕೂಡ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳಿಗೆ ಮಾಹಿತಿ
ವಕೀಲ ಕಾರೇರ ಕವನ್ ಮಾದಪ್ಪ ಮಾತನಾಡಿ; ಶಿಬಿರದಲ್ಲಿ ತರಬೇತಿ ಮಾತ್ರವಲ್ಲದೆ, ಮಕ್ಕಳ ಭವಿಷ್ಯಕ್ಕೆ ಪೂರಕವಾದ ಮಾರ್ಗದರ್ಶನ ಹಾಗೂ ಮಾಹಿತಿ ನೀಡಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳು ಶಿಬಿರಕ್ಕೆ ಆಗಮಿಸಿ ಮಾಹಿತಿ ನೀಡುತ್ತಾರೆ. ಇದು ಮಕ್ಕಳಿಗೆ ಅನುಕೂಲಕರವಾಗಲಿದೆ ಎಂದು ತಿಳಿಸಿದರು.
ಮುಂದೆ ಬರಬೇಕು
ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಮಾತನಾಡಿ, ಶಿಬಿರಾರ್ಥಿಗಳನ್ನು ಇತರ ಕಡೆಗಳಲ್ಲಿ ನಡೆಯುವ ಶಿಬಿರಕ್ಕೆ ಕರೆದೊಯ್ದು ಹೆಚ್ಚಿನ ಮಾಹಿತಿ ನೀಡಲಾಗುತ್ತಿದ್ದು, ಇದರಿಂದ ಮಕ್ಕಳಿಗೆ ಇನ್ನಷ್ಟು ಕಲಿಯಲು ಅವಕಾಶವಾಗಲಿದೆ. ಜೊತೆಗೆ ಹಿರಿಯ ಆಟಗಾರರು, ನುರಿತ ತಜ್ಞರನ್ನು ಕರೆಸಿ ಮಕ್ಕಳಿಗೆ ಹಿತವಚನ ನೀಡಲಾಗುವುದು. ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪೋಷಕರು ಆಸಕ್ತಿಯಿಂದ ಮುಂದೆ ಬರಬೇಕು ಎಂದು ಹೇಳಿದರು. ಗೋಷ್ಠಿಯಲ್ಲಿ ವಾಂಡರ‍್ಸ್ನ ಬಾಬು ಸೋಮಯ್ಯ, ಗಣೇಶ್ ಇದ್ದರು.