ಮಡಿಕೇರಿ, ಮಾ. ೨೭: ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಗೋವಾದಲ್ಲಿ ಜರುಗಿದ ಯೋನೆಕ್ಸ್ ಸನ್ ರೈಸ್ ೪೫ನೇ ಇಂಡಿಯನ್ ಮಾಸ್ಟರ್ಸ್ ರಾಷ್ಟಿçÃಯ ಬ್ಯಾಡ್ಮಿಂಟನ್ ಶಿಪ್ನಲ್ಲಿ ಕೊಡಗಿನವರಾದ ತಾತಪಂಡ ಜ್ಯೋತಿ ಸೋಮಯ್ಯ ಸಾಧನೆ ತೋರಿದ್ದು, ವಿಶ್ವ ಚಾಂಪಿಯನ್ ಶಿಪ್ಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಮಾಸ್ಟರ್ಸ್ ಬ್ಯಾಡ್ಮಿಂಟನ್: ಜ್ಯೋತಿಗೆ ಬೆಳ್ಳಿ
(ಮೊದಲ ಪುಟದಿಂದ) ೫೫+ ವಿಭಾಗದಲ್ಲಿ ಸಿಂಗಲ್ಸ್ನಲ್ಲಿ ಜ್ಯೋತಿ ಸೋಮಯ್ಯ ಅವರು ರನ್ನರ್ ಅಪ್ ಆಗಿ ಬೆಳ್ಳಿ ಪದಕ ಹಾಗೂ ಡಬಲ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಈ ಸಾಧನೆಯೊಂದಿಗೆ ಇವರು ದಕ್ಷಿಣ ಕೊರಿಯಾದಲ್ಲಿ ಜರುಗಲಿರುವ ಬಿ.ಡಬ್ಲುö್ಯ.ಎಫ್. ವಿಶ್ವ ಚಾಂಪಿಯನ್ ಶಿಪ್-೨೦೨೩ಕ್ಕೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜ್ಯೋತಿ ಅವರು ಸಿಂಗಲ್ಸ್ನಲ್ಲಿ ಫೈನಲ್ನಲ್ಲಿ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಆಡಿದ್ದು, ಅಲ್ಪ ಪಾಯಿಂಟ್ನಿAದ ಸೋಲು ಅನುಭವಿಸಿದರೂ, ಈ ಸಾಧನೆ ತೃಪ್ತಿ ತಂದಿದೆ ಎಂದಿದ್ದಾರೆ.