ಕೂಡಿಗೆ, ಮಾ, ೨೭: ಸರಕಾರದ ವತಿಯಿಂದ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಪಡೆದುಕೊಂಡಿದೆ.

ಗ್ರಾಮ ಪಂಚಾಯಿತಿಯು ೨೦೨೧-೨೨ ಸಾಲಿನಲ್ಲಿ ಪಂಚಾಯಿತಿ ಮಾಡಿದ ಸಾಧನೆಗಳನ್ನು ಗುರುತಿಸಿ, ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಿದೆ.

ಬೆಂಗಳೂರು ಅರಮನೆಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಮತ್ತು ನಗದು ರೂ. ೫ ಲಕ್ಷ ಚೆಕ್ ಅನ್ನು ಪಂಚಾಯಿತಿಗಳು ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯರಾದ ಕೆ, ಎಂ, ಚಂದ್ರಶೇಖರ್, ಮಣಿಕಂಠ, ಈರಯ್ಯ, ಲಕ್ಷಿö್ಮ, ದೀಪ, ಅಭಿವೃದ್ಧಿ ಅಧಿಕಾರಿ ಎಂ.ಆರ್. ಸಂತೋಷ, ಕಂದಾಯ ವಸೂಲಿಗಾರ ಅವಿನಾಶ್ ಭಾಗವಹಿಸಿದ್ದರು.