ಚೆಯ್ಯಂಡಾಣೆ, ಮಾ. ೨೬. ಕೊಂಡAಗೇರಿ ಸುನ್ನೀ ಮುಸ್ಲಿಂ ಜಮಾಅತ್ ಯುಎಇ ಸಮಿತಿಯ ವಾರ್ಷಿಕ ಮಹಾಸಭೆಯು ದುಬೈನಲ್ಲಿ ಇತ್ತೀಚೆಗೆ ನಡೆಯಿತು.

ಯುಎಇ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಹೆಚ್.ಹೆಚ್. ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಫಿ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮರ್ಕಝ್ ಕೊಟ್ಟಮುಡಿ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿ ಮಾತನಾಡಿದರು.

ದುಬೈ, ಅಬುಧಾಬಿ, ಶಾರ್ಜಾ, ಅಜ್ಮಾನ್ ಸೇರಿದಂತೆ ಯುಎಇಯ ವಿವಿಧ ಕಡೆಗಳಲ್ಲಿ ನೆಲೆಸಿರುವ ಕೊಂಡAಗೇರಿಯ ಅನಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಿಯಾಝ್ ಕೆ.ವೈ. ಸ್ವಾಗತಿಸಿದರೆ, ಮುಜೀಬ್ ಮಾಸ್ಟರ್ ವಂದನಾರ್ಪಣೆ ಸಲ್ಲಿಸಿದರು.

ನೂತನ ಪದಾಧಿಕಾರಿಗಳು ಅಧ್ಯಕ್ಷರಾಗಿ ಶಾಫಿ ಸಖಾಫಿ ಜೆ.ಯು., ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಎ.ಹೆಚ್., ಕೋಶಾಧಿಕಾರಿಯಾಗಿ ನೌಶಾದ್ ಎಸ್.ಎಂ., ಉಪಾಧ್ಯಕ್ಷರಾಗಿ ಹಸನ್ ಪಿ.ಎ. ಹಾಗೂ ಹಮೀದ್ ಕೆ.ಹೆಚ್., ಕಾರ್ಯದರ್ಶಿಗಳಾಗಿ ರಿಯಾಝ್ ಕೆ.ವೈ., ಮುಜೀಬ್ ಪಿ.ಎಂ., ಸಮಿತಿ ಸದಸ್ಯರುಗಳಾಗಿ ಮಸೂದ್ ಎ.ಎ., ಅಝೀಝ್ ಹೆಚ್.ವೈ., ಇಬ್ರಾಹಿಂ ಪಿ.ಹೆಚ್., ರಝಾಕ್ ಎ.ಇ., ರಫೀಕ್ ಎ.ಹೆಚ್., ಹನೀಫ್ ಎ.ಇ., ಝುಬೈರ್ ಹಾಜಿ ಪಿ.ಎಸ್., ಸೈಫ್ ಜೆ.ಎಸ್., ಮುನವ್ವರ್ ಎನ್.ಕೆ., ಬಷೀರ್ ಪಿ.ಎ., ಲತೀಫ್ ಕೆ.ಹೆಚ್., ಸಲಾಂ ಎ.ಇ., ರೌಫ್ ಪಿ.ಎಂ., ಫಿರೋಝ್ ಹಾಗೂ ಸಲಹಾ ಸಮಿತಿಗೆ ರಫೀಕ್ ಹಾಫಿಲ್, ಅಬ್ದುಲ್ಲಾ ಹೆಚ್.ಹೆಚ್., ಅಬ್ದುಲ್ಲಾ ಉಸ್ತಾದ್ ಎ.ಎ., ಸಲಾಂ ಎನ್.ಇ. ಅವರನ್ನು ಆಯ್ಕೆ ಮಾಡಲಾಯಿತು.