ಕೂಡಿಗೆ, ಮಾ. ೨೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಶ್ರೀ ಮಂಜುನಾಥ ಸ್ತಿçÃಶಕ್ತಿ ಸಂಘ, ತುಳಸಿ ವರಲಕ್ಷಿö್ಮ ಸ್ತಿçÃಶಕ್ತಿ ಸಂಘ, ಅನ್ನಪೂರ್ಣೇಶ್ವರಿ ಸ್ತಿçÃಶಕ್ತಿ ಸಂಘ, ರಾಜರಾಜೇಶ್ವರಿ ಸ್ತಿçÃಶಕ್ತಿ ಸಂಘ, ಸರಸ್ವತಿ ಸ್ತಿçÃಶಕ್ತಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಉದ್ಘಾಟನೆಯನ್ನು ಶಾಸಕ ಅಪ್ಪಚ್ಚು ರಂಜನ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಜಗತ್ತನ್ನೇ ಆಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇಂದಿನ ಕಾಲಘಟ್ಟದ ಮಹಿಳೆಯರು ತಮ್ಮ ಮನೆಯಲ್ಲಿ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಗುಣ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಸಮಾನತೆ ಎಂಬುದು ಕೇವಲ ಹೆಸರಿಗೆ ಮಾತ್ರ ಎಂಬAತೆ ಭಾಸವಾಗುತ್ತಿದೆ. ಇಂದಿಗೂ ಮಹಿಳೆ ಹಲವು ವಿಚಾರಗಳಲ್ಲಿ ನಲುಗಿ ಕಣ್ಣೀರಿಡುತ್ತಿದ್ದಾರೆ ಎಂದÀÄ ವಿಷಾದಿಸಿದರು.

ಸ್ತಿçÃಶಕ್ತಿ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್ ಮಹಿಳೆಯರು ಮಹಿಳೆಯರಿಗೆ ಸಹಾನುಭೂತಿಯ ಅವಶ್ಯಕತೆಯಿಲ್ಲ. ಅವರು ಸಬಲರಾಗಲು ಅಗತ್ಯ ಸಹಕಾರ ದೊರೆಯುವಂತಾಗಬೇಕಿದೆ ಎಂದರು.

ಕೂಡುಮAಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರಾದ ಕೆ.ಕೆ. ಭೋಗಪ್ಪ, ಶಶಿಕಲಾ, ಶಿವಮ್ಮ ಗಣೇಶ್, ದೊಡ್ಡಮ್ಮ ತಾಯಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಪವನ್ ಕುಮಾರ್, ಒಕ್ಕೂಟದ ತಾಲೂಕು ಅಧ್ಯಕ್ಷೆ ಎಂ.ಕೆ. ಸುಮತಿ, ಕಾರ್ಯದರ್ಶಿ ಹೇಮಲತಾ, ಪ್ರಮುಖರಾದ ವೀಣಾ ಪವನ್, ಗಣೇಶ್ ಸೇರಿದಂತೆ ಸದಸ್ಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರು, ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು.