ಚೆಯ್ಯಂಡಾಣೆ, ಮಾ. ೨೭: ಎಡಪಾಲದ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಸ್‌ಎಫ್ ಸಂಯುಕ್ತ ಆಶ್ರಯದಲ್ಲಿ ೧೦೧ ಕುಟುಂಬಕ್ಕೆ ರಂಝಾನ್ ಪ್ರಯುಕ್ತ ಆಹಾರ ದಾನ್ಯಗಳ ಕಿಟ್ಟನ್ನು ವಿತರಿಸಲಾಯಿತು.

ವಿತರಣಾ ಕಾರ್ಯಕ್ರಮದ ನೇತೃತ್ವವವನ್ನು ಸ್ಥಳೀಯ ಮಸೀದಿಯ ಖತೀಬ್ ನಿಝಾರ್ ಪೈಝಿ ಅಂಡತ್ ಮಾನಿ ದರ್ಗಾದಲ್ಲಿ ಪ್ರಾರ್ಥನೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ, ಎಡಪಾಲ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಉಮ್ಮರ್ ಸಿಆರ್‌ಪಿ, ಎಸ್‌ವೈಎಸ್ ಅಧ್ಯಕ್ಷ ಶರೀಫ್ ಝೈನಿ, ಎಸ್‌ಎಸ್‌ಎಫ್ ಅಧ್ಯಕ್ಷ ಷಂಶುದ್ದೀನ್, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಸಿ.ಎ. ಅಬೂಬಕ್ಕರ್, ಪದಾಧಿಕಾರಿಗಳಾದ ಬಷೀರ್, ಖಾದರ್ ಸಅದಿ, ಮಹ್ಮೂದ್ ಮತ್ತಿತರರು ಹಾಜರಿದ್ದರು.