ವೀರಾಜಪೇಟೆ, ಮಾ. ೨೬: ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವವು ವಿವಿಧ ಧಾರ್ಮಿಕ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ನಡೆದು ವಸೂರಿಮಾಲ ವಾರಣದೊಂದಿಗೆ ಈ ವರ್ಷದ ವಾರ್ಷಿಕ ಮಹೋತ್ಸವಕ್ಕೆ ಸಾಂಪ್ರದಾಯಿಕ ತೆರೆ ಎಳೆಯಲಾಯಿತು.
ವೀರಾಜಪೇಟೆ ನಗರದ ಮೀನುಪೇಟೆ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ೭೯ನೇ ವಾರ್ಷಿಕ ತೆರೆ ಮಹೋತ್ಸವ ಗಣಪತಿ ಹೋಮ ಬಳಿಕ ಧ್ವಜಾರೋಹಣ ದೊಂದಿಗೆ ಆರಂಭಗೊAಡಿತು. ಸಂಜೆ ಮುತ್ತಪ್ಪನ್ ವೆಳ್ಳಾಟಂ ನಡೆದು ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಳಿಕ ಉಗ್ರಂ ಉಜ್ವಲಂ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾ. ೨೨ ರಂದು ಸಂಜೆ ಮುತ್ತಪ್ಪನ್ ವೆಳ್ಳಾಟಂ ಮೊದಕಲಶ ದೊಂದಿಗೆ ತಾಲಪ್ಪೊಲಿ, ಸಿಂಗಾರಿ ಮೇಳಂ, ದೀಪದೊಂದಿಗೆ ನೃತ್ಯ ಕಾರ್ಯಕ್ರಮ ಹಾಗೂ ಚೆಂಡೆ ಮೇಳದೊಂದಿಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯು ನಗರದ ತೆಲುಗರ ಬೀದಿ ಯಿಂದ ಹೊರಟು ಮುಖ್ಯ ಬೀದಿ ಗಳಲ್ಲಿ ಸಂಚರಿಸಿ ದೇವಾಲಯಕ್ಕೆ ಆಗಮಿಸಿತು.
ಸಂಜೆ ವಿವಿಧ ತೆರೆಗಳಾದ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣು ಮೂರ್ತಿ ವೆಳ್ಳಾಟಂ ನಡೆಯಿತು. ಗುರುವಾರ ಪ್ರಾತ:ಕಾಲ ಶಾಸ್ತಪ್ಪನ್ ಮತ್ತು ಗುಳಿಗನ್ ಕೋಲ, ತಿರುವಪ್ಪನ್, ಭಗವತಿ, ವಸೂರಿಮಾಲ ತೆರೆ, ವಿಷ್ಣುಮೂರ್ತಿ ತೆರೆ, ವಿಷ್ಣುಮೂರ್ತಿ ವಾರಣದೊಂದಿಗೆ ವಾರ್ಷಿಕ ತೆರೆ ಮಹೋತ್ಸವಕ್ಕೆ ಅಂತಿಮ ತೆರೆ ಎಳೆಯಲಾಯಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ವೀರಾಜಪೇಟೆ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿದ್ದರು.