ಸೋಮವಾರಪೇಟೆ, ಮಾ. ೨೬: ಸಮೀಪದ ಯಡೂರು ಬಿ.ಟಿ.ಸಿ.ಜಿ. ಕಾಲೇಜು ಆವರಣದಲ್ಲಿ ಶೌರ್ಯ ತಂಡದವರು ಶ್ರಮದಾನ ನಡೆಸಿದರು.
ಕಾಲೇಜು ಆವರಣದಲ್ಲಿ ಗಿಡಗಂಟಿಗಳು ಬೆಳೆದಿರುವುದನ್ನು ಗಮನಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಮದಾಸ್ ನೇತೃತ್ವದ ವಿಪತ್ತು ನಿರ್ವಹಣಾ ಶೌರ್ಯ ತಂಡದ ಹದಿನೈದು ಮಂದಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.
ಈ ಸಂದರ್ಭ ತಾಲೂಕು ಯೋಜನಾಧಿಕಾರಿ ರೋಹಿತ್, ಕಾಲೇಜು ಪ್ರಾಂಶುಪಾಲೆ ಧನಲಕ್ಷ್ಮಿ, ಸೂಪರಿಂಡೆAಟ್ ಶಿವನವೀನ್, ಸಿಬ್ಬಂದಿ ಜವರಪ್ಪ ಸೇರಿದಂತೆ ಇತರರು ಹಾಜರಿದ್ದರು.