ಮಡಿಕೇರಿ, ಮಾ. ೨೭: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.
ಸರಕಾರ ಹಾಗೂ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಸ್ವೀಕಾರಗೊಳ್ಳುತ್ತಿರುವ ಶೈಕ್ಷಣಿಕ ಸಹಾಯಧನ ಅರ್ಜಿಯಲ್ಲಿ ಕೆಲವು ಲೋಪದೋಷಗಳಿವೆ. ಇದರಿಂದ ತಂತ್ರಾAಶದಲ್ಲಿ ಕೆಲ ಬದಲಾವಣೆ ಮಾಡಬೇಕು, ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡಬೇಕು, ಆರೋಗ್ಯ ಸಂಜೀವಿನಿ ಜಾರಿಗೊಳಿಸಬೇಕು, ಕಾರ್ಮಿಕ ಅರ್ಜಿ ಸಲ್ಲಿಕೆಗೆ ಇರುವ ನೂತನ ತಂತ್ರಾAಶದ ಕುರಿತು ತರಬೇತಿ ನೀಡಬೇಕು, ಕಲ್ಯಾಣ ಮಂಡಳಿಯಿAದ ಆರಂಭಗೊಳಿಸಲು ಉದ್ದೇಶಿಸಿರುವ ಶಿಶು ವಿಹಾರಗಳನ್ನು ರದ್ದುಗೊಳಿಸಬೇಕು, ನೈಜ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಲ್ಲಿ ಪ್ರಾತಿನಿಧ್ಯ ದೊರೆಯಬೇಕು, ಅರ್ಜಿಗಳ ವಿಲೇವಾರಿ ವಿಳಂಬವಾಗದAತೆ ಕ್ರಮವಹಿಸಬೇಕು, ಕಾರ್ಮಿಕ ಇಲಾಖೆಯಲ್ಲಿರುವ ಹುದ್ದೆಗಳನ್ನು ಶೀಘ್ರ ಭರ್ತಿಗೊಳಿಸಬೇಕು, ಮನೆ ನಿರ್ಮಾಣಕ್ಕೆ ರೂ. ೫ ಲಕ್ಷ ಸಹಾಯಧನ ಜಾರಿ ಮಾಡಲು ಕ್ರಮವಹಿಸಬೇಕು, ಕಾರ್ಮಿಕರಿಗೆ ನೀಡುವ ರೇಷನ್, ಟೂಲ್, ಸುರಕ್ಷಾ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಅರ್ಹ ಫಲಾನುಭವಿ ಗಳಿಗೆ ತಲುಪುವಂತೆ ನೋಡಿಕೊಳ್ಳ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ಸಂಘದ ಜಿಲ್ಲಾಧ್ಯಕ್ಷ ಎ.ಸಿ. ಸಾಬ, ಕಾರ್ಯದರ್ಶಿ ರತೀಶ್ ಕುಮಾರ್, ಖಜಾಂಜಿ ಹಮೀದ್, ಸಹಕಾರ್ಯದರ್ಶಿಗಳಾದ ಎಸ್. ರೂಪ, ಕೆ.ಕೆ. ಹರಿದಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.