ವೀರಾಜಪೇಟೆ, ಮಾ. ೨೭: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟಿçÃಯ ಬಾಯಿ ಆರೋಗ್ಯ ಮತ್ತು ದಂತ ಭಾಗ್ಯ ಯೋಜನೆ ಕಾರ್ಯಕ್ರಮದಡಿಯಲ್ಲಿ ವೀರಾಜಪೇಟೆಯ ಕೊಡಗು ದಂತ ಮಹಾವಿದ್ಯಾಲಯ ಇವರ ಸಹಭಾಗಿತ್ವದಲ್ಲಿ ವಿಶ್ವ ಬಾಯಿ ಆರೋಗ್ಯ ದಿನದ ಅಂಗವಾಗಿ ಬಾಯಿ ಆರೋಗ್ಯದ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಚಾಲನೆ ನೀಡಿದರು.
ಜಾಥಾವು ಮಾರಿಯಮ್ಮ ದೇವಸ್ಥಾನದಿಂದ ಆರಂಭ ಗೊಂಡು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಕ್ತಾಯವಾಯಿತು.
ಜಿಲ್ಲಾ ದಂತ ನೋಡಲ್ ಅಧಿಕಾರಿ ಡಾ. ರೇವಣ್ಣ ಮಾತನಾಡಿ, ಬಾಯಿ ಮತ್ತು ದಂತ ಆರೋಗ್ಯದ ಮಹತ್ವದ ಬಗ್ಗೆ ವಿವರಿಸಿದರು. ವಿಶ್ವ ಬಾಯಿ ಆರೋಗ್ಯ ದಿನಾಚರಣೆಯ ಘೋಷ ವಾಕ್ಯ "ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ಹೆಮ್ಮೆ ಇರಲಿ" ಎಂಬುದಾಗಿದ್ದ ಬಾಯಿಯ ಆರೋಗ್ಯವನ್ನು ಸದಾ ಕಾಪಾಡಿ ಕೊಳ್ಳಬೇಕು ಎಂದು ತಿಳಿಸಿದರು.
ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್, ಬಾಯಿ ಆರೋಗ್ಯದ ಬಗ್ಗೆ ಸಲಹೆ ಮತ್ತು ಸೂಚನೆ ನೀಡಿದರು ಮತ್ತು ತಂಬಾಕು ಸೇವನೆ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಕೊಡಗು ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೊನ್ನಪ್ಪ ಮಾತನಾಡಿ, ಬಾಯಿ ಮತ್ತು ದಂತ ಆರೋಗ್ಯವನ್ನು ಪ್ರಾರಂಭದಿAದಲೇ ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಸರಿಯಾದ ಕ್ರಮಗಳನ್ನು ಅನುಸರಿಸಬೇಕೆಂದರು.
ಈ ಸಂದರ್ಭ ಡಾ. ಸಮೀರ್, ಡಾ. ಜಗದೀಶ್, ಡಾ. ಅರವಿಂದ್, ಡಾ. ಮನ್ಪ್ರೀತ್, ಡಾ. ನೂರ್ ಫಾತಿಮಾ, ಡಾ. ಯಶ್ವಿನ್ ಹಾಗೂ ಕೊಡಗು ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.