ಮಡಿಕೇರಿ, ಮಾ. ೨೬: ಹೊದ್ದೂರು ಗ್ರಾಮದ ಶ್ರೀ ಭಗವತಿ, ಭದ್ರಕಾಳಿ ಹಾಗೂ ಶ್ರೀ ಚಾಮುಂಡಿ ದೇವರ ವಾರ್ಷಿಕ ಉತ್ಸವ ತಾ. ೨೮ ರಿಂದ ನಡೆಯಲಿದೆ. ತಾ. ೨೮ ರಂದು ಸಂಜೆ ೬ ಗಂಟೆಗೆ ಶ್ರೀ ಭಗವತಿ ಹಾಗೂ ಮಹಾದೇವರ ನಡೆಯಲ್ಲಿ ಅಂದಿಬೊಳಕ್, ತಾ. ೨೯ ರಂದು ಪಟ್ಟಣಿ, ಬೋಡ್ಕಳಿ, ರಾತ್ರಿ ೭ ಗಂಟೆಗೆ ಶ್ರೀ ಭಗವತಿ ದೇವರ ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ತಾ. ೩೦ ರಂದು ಬೆಳಿಗ್ಗೆ ಶ್ರೀ ಭದ್ರಕಾಳಿ ಹಾಗೂ ಶ್ರೀ ಎತ್ತೊಳಮ್ಮೆ ಕೋಲ, ತಾ. ೩೧ ರಂದು ಸಂಜೆ ೬ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ನಡೆ ತೊರ್ಪೊ, ಕೊಟ್ಟಿಪಾಡ್ವೊ, ಅಂದಿತೋತ. ಏಪ್ರಿಲ್ ೧ ರಂದು ಮೇಲೇರಿಗೆ ಬೆಂಕಿ ಇಡುವುದು, ವಿವಿಧ ತೋತ, ಏ. ೨ ರಂದು ಬೆಳಿಗ್ಗೆ ಕಲ್ಯಾಟಜ್ಜಪ್ಪ ಕೋಲ ಹಾಗೂ ಶ್ರೀ ಚಾಮುಂಡಿ ದೈವದ ಮೇಲೇರಿ, ಭಾರಣಿ ನಡೆಯಲಿದೆಯೆಂದು ಊರು ತಕ್ಕ ನೆರವಂಡ ಸಂಜಯ್ ಪೂಣಚ್ಚ ತಿಳಿಸಿದ್ದಾರೆ.