ಮಡಿಕೇರಿ, ಮಾ. ೨೬: ‘ಕೊಡವ ಜನಾಂಗವನ್ನು ಹೈಬ್ರಿಡ್ ಜನಾಂಗ’ವೆAದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಮಂಡ್ಯ ಜಿಲ್ಲೆಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ‘ಅಖಿಲ ಕೊಡವ ಸಮಾಜ’ಕ್ಕೆ ಪತ್ರ ಬರೆಯುವ ಮೂಲಕ ಬಹಿರಂಗವಾಗಿ ಕೊಡವರ ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಅಖಿಲ ಕೊಡವ ಸಮಾಜಕ್ಕೆ ಪತ್ರ ಬರೆದು ಕ್ಷಮೆಯಾಚಿ ಸಿರುವ
(ಮೊದಲ ಪುಟದಿಂದ) ಪ್ರೊ. ಜಯಪ್ರಕಾಶ್ ಗೌಡರು ನಾನು ಯಾವುದೇ ದುರುದ್ದೇಶದಿಂದ ಹೇಳಿಕೆಯನ್ನು ನೀಡಲಿಲ್ಲ, ಆದಿ ಚುಂಚನಗಿರಿ ಶ್ರೀಮಠದ ಪೀಠಾಧ್ಯಕ್ಷರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಉತ್ತರ ನೀಡುವ ಭರದಲ್ಲಿ ಪ್ರಮಾದವಾಗಿದೆ ಹೊರತು ಜನಾಂಗದ ಮೇಲೆ ನನಗೆ ಅಪಾರವಾದ ಗೌರವವಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನಂತಹ ವೀರರು ಸೇರಿದಂತೆ ಲಕ್ಷಾಂತರ ವೀರ ಯೋಧರನ್ನು ನೀಡಿದ ಕೊಡವ ಜನಾಂಗದ ಮೇಲೆ ಇಡೀ ಭರತಖಂಡವೇ ಹೆಮ್ಮೆಪಡುತ್ತದೆ. ನನ್ನ ಮಾತಿನಿಂದ ಜನಾಂಗಕ್ಕೆ ನೋವಾಗಿದ್ದರೆ ನಾನು ಕೊಡವ ಜನಾಂಗದ ಕ್ಷಮೆ ಕೇಳುತ್ತೇನೆ. ಇದನ್ನು ಮುಂದುವರೆಸಿಕೊAಡು ಹೋಗದಂತೆ ಕೇಳಿಕೋಳ್ಳುತ್ತೇನೆ. ಇದು ಕಾರ್ಯಪ್ಪನವರಿಗೆ ಆಡಿದ ಮಾತು ಹೊರತು ಕೊಡವ ಸಮುದಾಯಕ್ಕೆ ಅಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ ಹೊರಬೀಳುತ್ತಿದ್ದಂತೆ ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದ ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಪತ್ರಿಕಾ ಹೇಳಿಕೆ ನೀಡುವ ಮೂಲಕ ೨೪ ಗಂಟೆಯೊಳಗೆ ಜಯಪ್ರಕಾಶ್ ಗೌಡ ಕೊಡವ ಜನಾಂಗದ ಕ್ಷಮೆಯಾಚನೆ ಮಾಡದಿದ್ದರೆ ಕಾನೂನು ರೀತಿಯ ಹೋರಾಟ ಹಾಗೂ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿತ್ತು. ಇದಕ್ಕೆ ಪೂರಕವಾಗಿ ಇಂದು ಫೆಡರೇಷನ್ ಆಫ್ ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜ ಕೂಡ ಎಚ್ಚರಿಕೆ ನೀಡಿತ್ತು.