ನಾಪೋಕ್ಲು, ಮಾ. ೨೬: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಎಂಟನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಕಲಿಯಂಡ ತಂಡವು ಕೇತಿರ ತಂಡದ ವಿರುದ್ಧ ೬-೦ ಗೋಲುಗಳ ಭರ್ಜರಿ ಜಯದೊಂದಿಗೆ ಮುಂದಿನ ಸುತ್ತು ಪ್ರವೇಶಿಸಿದೆ.
ಅಂತೆಯೇ ಕಾಂಗಿರ, ಮಚ್ಚಾರಂಡ, ಮುಂಡಚಾಡಿರ, ಚೆರುವಾಳಂಡ, ಮಾರ್ಚಂಡ, ಕುಲ್ಲಚಂಡ, ಕಳ್ಳಿಚಂಡ, ಐನಂಡ, ಮಾಚಿಮಂಡ, ಬೇರೆರ, ಕಾವಾಡಿಚಂಡ, ಚಪ್ಪಂಡ, ಕರವಂಡ, ಮುಕ್ಕಾಟಿರ (ಕಡಗದಾಳು), ಕೊಂಡಿರ, ತೀತಿಮಾಡ, ಮಾತಂಡ, ಚೇನಂಡ, ಕೊಲ್ಲಿರ, ಪುಲಿಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿವೆ.
ಮೈದಾನ ೧ರಲ್ಲಿ ಕಾಂಗಿರ ಮತ್ತು ಕಿರಿಯಮಾಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕಾಂಗಿರ ತಂಡವು ಕಿರಿಯಮಾಡ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಮಚ್ಚಾರಂಡ ತಂಡವು ತೀತಿರ ತಂಡವನ್ನು ೫-೧ ಗೋಲಿನ ಅಂತರದಿAದ ಪರಾಭವಗೊಳಿಸಿತು. ಮುಂಡಚಾಡಿರ ತಂಡವು ಪೋರಂಗಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ಮಾಪಂಗಡ ತಂಡದ ಗೈರು ಹಾಜರಿನ ಕಾರಣ ಚೆರುವಾಳಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಮಾರ್ಚಂಡ ತಂಡವು ಮುಕ್ಕಾಟಿರ ತಂಡವನ್ನು ೩-೧ ಗೋಲುಗಳ ಅಂತರದಿAದ ಸೋಲಿಸಿತು. ಕುಲ್ಲಚಂಡ ತಂಡವು ಬಾಳೆಯಡ ತಂಡವನ್ನು ೨-೧ ಗೋಲಿನ ಅಂತರದಿAದ ಪರಾಭವಗೊಳಿಸಿತು. ಕಳ್ಳಿಚಂಡ ತಂಡವು ಮೇವಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಮೈದಾನ ೨ರಲ್ಲಿ ನಡೆದ ಅಲ್ಲಪಂಡ ಮತ್ತು ಐನಂಡ ತಂಡಗಳ ನಡುವಿನ ಪಂದ್ಯದಲ್ಲಿ ಐನಂಡ ತಂಡವು ಅಲ್ಲಪಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಮಾಚಿಮಂಡ ತಂಡವು ಚೊಟ್ಟೆಯಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಕೇತಿರ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ೦-೬ ಗೋಲುಗಳ ಅಂತರದಲ್ಲಿ ಕಲಿಯಂಡ ಗೆಲುವು ದಾಖಲಿಸಿತು. ಬೇರೆರ ತಂಡವು ಚಿಕ್ಕಂಡ ತಂಡವನ್ನು ೫-೦ ಗೋಲುಗಳ ಅಂತರದಿAದ ಮಣಿಸಿತು. ಕಾವಾಡಿಚಂಡ ತಂಡವು ಮದ್ರಿರ ತಂಡವನ್ನು ೩-೧ ಗೋಲುಗಳ ಅಂತರದಿAದ ಮಣಿಸಿತು. ಚಪ್ಪಂಡ ತಂಡವು ಕಲ್ಲುಮಾಡಂಡ ತಂಡವನ್ನು ಟೈಬ್ರೇಕರ್ನ ೮-೭ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕರವಂಡ ತಂಡವು ಮಾದಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಮೈದಾನ ೩ರಲ್ಲಿ ನಡೆದ ಅಮ್ಮಂಡ ಮತ್ತು ಮುಕ್ಕಾಟಿರ (ಕಡಗದಾಳು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಅಮ್ಮಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೊಂಡಿರ ತಂಡವು ಮೂಕಚಂಡ ತಂಡವನ್ನು ೩-೧ ಗೋಲುಗಳ ಅಂತರದಿAದ ಮಣಿಸಿತು. ತೀತಿಮಾಡ ತಂಡವು ನಾಗಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಮಣಿಸಿತು. ಮಾತಂಡ ತಂಡವು ಕಬ್ಬಚ್ಚಿರ ತಂಡವನ್ನು ೫-೧ ಗೋಲುಗಳ ಅಂತರದಿAದ ಸೋಲಿಸಿತು. ಚೇನಂಡ ತಂಡವು ತಿರೋಡಿರ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ನೆಲ್ಲಚಂಡ ತಂಡದ ಗೈರುಹಾಜರಿನಿಂದ ಕೊಲ್ಲೀರ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಪುಲಿಯಂಡ ತಂಡವು ಪೆಮ್ಮಡಿಯಂಡ ತಂಡವನ್ನು ೫-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು.
-ಪಿ.ವಿ. ಪ್ರಭಾಕರ್