ನಾಪೋಕ್ಲು, ಮಾ. ೨೫: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಏಳನೇ ದಿನದ ಪಂದ್ಯಾಟದಲ್ಲಿ ನಾಳಿಯಂಡ, ನಂಬಡಮAಡ, ಮಣವಟ್ಟಿರ, ಚೆಕ್ಕೆರ, ಕೋದಂಡ, ನುಚ್ಚಿಮಣಿಯಂಡ, ಪುಲ್ಲಂಗಡ, ನಾಪಂಡ, ಬಿದ್ದಂಡ, ಪೊನ್ನೋಲತಂಡ, ಚಂದೂರ, ವಾಟೇರಿರ, ಮೇರಿಯಂಡ, ಕರ್ತಮಾಡ, ಬೊಳಕಾರಂಡ, ಕೇಲೇಟಿರ, ಮುರುವಂಡ, ತೀತಮಾಡ, ಪುಟ್ಟಿಚಂಡ, ಪೆಬ್ಬಟ್ಟಿರ, ಕಂಗಾAಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರ ಆತಿಥೇಯ ಅಪ್ಪಚೆಟ್ಟೋಳಂಡ ಮತ್ತು ನಾಳಿಯಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ನಾಳಿಯಂಡ ತಂಡವು ಅಪ್ಪಚೆಟ್ಟೋಳಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ನಂಬಡಮAಡ ತಂಡವು ಬಾಚಮಂಡ ತಂಡವನ್ನು ೪-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಮಣವಟ್ಟಿರ ತಂಡವು ಕುಂಚೆಟ್ಟಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ಚೆಕ್ಕೇರ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೆರ ತಂಡವು ಕಲ್ಲಂಗಡ ತಂಡವನ್ನು ೬-೨ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೋದಂಡ ತಂಡವು ಮಾಪಣಮಾಡ ತಂಡವನ್ನು ೫-೪ ಗೋಲುಗಳ ಅಂತರದಿAದ ಸೋಲಿಸಿತು. ನುಚ್ಚಿಮಣಿಯಂಡ ತಂಡವು ಕೇಳಪಂಡ ತಂಡವನ್ನು ೪-೨ ಗೋಲಿನ ಅಂತರದಿAದ ಪರಾಭವಗೊಳಿಸಿತು. ಪುಲ್ಲಂಗಡ ತಂಡವು ಬೇಪಡಿಯಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮೈದಾನ ೨ರಲ್ಲಿ ನಡೆದ ಮರುವಂಡ ಮತ್ತು ನಾಪಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಪಂಡ ತಂಡವು ಮರುವಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಬಿದ್ದಂಡ ತಂಡವು ಚೆಟ್ಟಿಯಾರಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಪೊನ್ನೋಲತಂಡ ತಂಡವು ಪಟ್ರಪಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಚಂದೂರ ತಂಡವು ತಾಪಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ವಾಟೇರಿರ ತಂಡವು ಕೋಳೆರ ತಂಡವನ್ನು ೩-೧ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು. ಮೇರಿಯಂಡ ತಂಡವು ಬೊಪ್ಪಂಡ ತಂಡವನ್ನು ೫-೦ ಗೋಲುಗಳ ಅಂತರದಿAದ ಮುಂದಿನ ಸುತ್ತು ಪ್ರವೇಶಿಸಿತು. ಕರ್ತಮಾಡ ಮತ್ತು ಪಾಲಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಮೈದಾನ ೩ರಲ್ಲಿ ನಡೆದ ನಾಮೇರ ಮತ್ತು ಬೊಳಕಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳಕಾರಂಡ ತಂಡವು ನಾಮೆರ ತಂಡವನ್ನು ೩-೧ ಗೋಲುಗಳ ಅಂತರದಿAದ ಮಣಿಸಿತು. ಕೇಲೇಟಿರ ತಂಡವು ನಂಬುಡಮಡ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿತು. ಮುರುವಂಡ ತಂಡವು ಅಚ್ಚಾಂಡಿರ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ತೀತಮಾಡ ತಂಡವು ಅಮ್ಮಾಟಂಡ ತಂಡವನ್ನು ೬-೨ ಗೋಲುಗಳ ಅಂತರದಿAದ ಸೋಲಿಸಿತು. ಪುಟ್ಟಿಚಂಡ ತಂಡವು ಬಾಚಿನಾಡಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಪೆಬ್ಬಟ್ಟಿರ ತಂಡವು ಬೊಳ್ಳಿಯಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಪರಾಭವ ಗೊಳಿಸಿತು. ಕಂಗಾAಡ ತಂಡವು ಮಾಚಿಮಾಡ ತಂಡವನ್ನು ೨-೧ ಗೋಲುಗಳ ಅಂತರದಿAದ ಪರಾಭವ ಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು.

-ಪಿ.ವಿ.ಪ್ರಭಾಕರ್