ಕೂಡಿಗೆ, ಮಾ. ೨೫: ಶ್ರೀ ಬಸವೇಶ್ವರ ಮತ್ತು ದಂಡಿನಮ್ಮ ದೇವಾಲಯ ಸಮಿತಿಯ ವತಿಯಿಂದ ಗ್ರಾಮದ ಪ್ರಮುಖ ದೇವರಾದ ಶ್ರೀ ಬಸವೇಶ್ವರ ಸ್ವಾಮಿ ಪೂಜೆ ಸಲ್ಲಿಸಿ ಯುಗಾದಿ ಹಬ್ಬ ಆಚರಣೆ ಮಾಡಲಾಯಿತು.

ಹಬ್ಬದ ಅಂಗವಾಗಿ ಸಂಪ್ರದಾಯದAತೆ ದೇವಾಲಯ ಸಮಿತಿಯವರು, ಗ್ರಾಮಸ್ಥರು ಕಾವೇರಿ ನದಿಗೆ ತೆರಳಿ ಅಲ್ಲಿ ಮುತ್ತತಿರಾಯ ದೇವರ ವಿಗ್ರಹಕ್ಕೆ ಗಂಗಾ ಸ್ನಾನ ಮಾಡಿಸಿ ನಂತರ ವಿಶೇಷ ಪೂಜೆ ನೆರವೇರಿಸಿದರು.

ನಂತರ ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಅರ್ಚಕ ಚಂದ್ರಮುರುಳಿ ಆರಾಧ್ಯ ನೆರವೇರಿಸಿದರು.

ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಟಿ. ಗಿರೀಶ್, ಕಾರ್ಯದರ್ಶಿ ಗುರುಪಾದಸ್ವಾಮಿ, ಮಾಜಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ನಿರ್ದೇಶಕರಾದ ರಾಜಶೇಖರ, ಚಂದ್ರಪ್ಪ, ಮಂಜುನಾಥ, ಯೊಗೇಶ್, ಪ್ರವೀಣ್, ಸೇರಿದಂತೆ ಇನ್ನಿತರರು ಹಾಜರಿದ್ದರು.