ಶ್ರೀಮಂಗಲ, ಮಾ. ೨೫: ವಿಶ್ವ ಹಿಂದೂ ಪರಿಷತ್ ವತಿಯಿಂದ ಅಮ್ಮತ್ತಿಯಲ್ಲಿ ಯುಗಾದಿ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನೆ, ಉಪನ್ಯಾಸ ಕಾರ್ಯಕ್ರಮ ನಡೆಯಿತು.

ತಾ. ೨೧ ರಂದು ಸಂಜೆ ಬೃಹತ್ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಜರುಗಿದರೆ, ಯುಗಾದಿಯ ದಿನವಾಗಿದ್ದ ತಾ. ೨೨ ರಂದು ಸ್ಥಳೀಯ ಕೊಡವ ಸಮಾಜದ ಸಭಾಂಗಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಯುಗಾದಿಯ ದಿನವಾದ ಬುಧವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಂತೆಯAಡ ಮಧು ಮಾಚಯ್ಯ, ಟೀನಾ ಮಾಚಯ್ಯ ಹಾಗೂ ಶ್ರೀನಿವಾಸ್ ಕೃಷ್ಣ ಅವರಿಂದ ಭಜನೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯೋಗ ಗುರು ಪೋಡಮಾಡ ಭವಾನಿ ನಾಣಯ್ಯ ಮಾತನಾಡಿ, ಎಲ್ಲಾ ಹಬ್ಬಗಳನ್ನು ಸಡಗರ ಸಂಭ್ರಮದಿAದ ಆಚರಿಸುತ್ತಾ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು.

ಬದುಕಿನಲ್ಲಿ ಹೊಸತನವನ್ನು ಸೃಷ್ಠಿಸುತ್ತಾ, ಒಂದು ಉತ್ತಮ ಸಮಾಜಕ್ಕೆ ನಾಂದಿ ಹಾಡೋಣ. ಹಾಗೆಯೇ ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಎಲ್ಲಾ ಕಷ್ಟಸುಖಗಳನ್ನು ಜಯಿಸಿ ಸಾಧನೆ ಮಾಡಿ ಸ್ಥಿತಪ್ರಜ್ಞರಾಗೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡರುಗಳಾದ ಕುಟ್ಟಂಡ ಪ್ರಿನ್ಸ್, ಜಿಲ್ಲೆಯ ಕೃಷ್ಣಕುಮಾರ್ ಹಾಗೂ ಪ್ರಥಮ್ ಕರುಂಬಯ್ಯ ಮುಂತಾದವರು ಭಾಗವಹಿಸಿದ್ದರು.