ಕುಶಾಲನಗರ, ಮಾ. ೨೪: ಕುಶಾಲನಗರದ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ನಡೆದಿದ್ದ ವಜ್ರಾಭರಣ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿತರಾಗಿದ್ದ ಈರ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಲಯ ಆದೇಶಿಸಿದೆ.

ಕೆಲವು ತಿಂಗಳ ಹಿಂದೆ ಕುಶಾಲನಗರದ ರೆಸಾರ್ಟ್ವೊಂದಕ್ಕೆ ನುಗ್ಗಿದ್ದ ಮೂಲತಃ ಮಡಿಕೇರಿಯ ಚಾಮುಂಡೇಶ್ವರಿ ನಗರದ, ಪ್ರಸ್ತುತ ಕಾರ್ಕಳದಲ್ಲಿ ನೆಲೆಸಿದ್ದ ಖಾಸಿಂ ಹಾಗೂ ಕಾರ್ಕಳದ ಸಿರಾಜುದ್ದೀನ್ ಎಂಬವರನ್ನು ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇವರಿಂದ ರೂ. ೧೫ ಲಕ್ಷದ ವಜ್ರಾಭರಣ, ೮೫ ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಈರ್ವರು ಆರೋಪಿಗಳು ರಾಜ್ಯದ ವಿವಿಧೆಡೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳಾಗಿದ್ದರು ಎಂದು ತಿಳಿದು ಬಂದಿದೆ.