ಮನೆಯಲ್ಲ್ಲಿ ಸವಲತ್ತುಗಳಿದ್ದರೂ, ಇಲ್ಲದಿದ್ದರೂ ಬೇರೆ-ಬೇರೆ ಕಾರಣ ಗಳಿಂದಾಗಿ ಕುಟುಂಬದಿAದ ಬೇರ್ಪಟ್ಟು ಮನೆ ಬಿಟ್ಟು ಬೀದಿ ಪಾಲಾಗಿರುವ ಅನೇಕ ಮಹಿಳೆಯ ರನ್ನು ನಾವು ಕಾಣುತ್ತೇವೆ. ಇಂಥವ ರಲ್ಲಿ ಬುದ್ಧಿಮಾಂದ್ಯರು, ಅಸ್ವಸ್ಥರು, ಬಾಳಿನಲ್ಲಿ ನೊಂದು-ಬೆAದವರು, ಮಕ್ಕಳಿಂದಲೇ ತಿರಸ್ಕರಿಸಲ್ಪಟ್ಟವರು, ಬಂಧು-ಬಳಗ ಇಲ್ಲದವರು, ದಾರಿ ತಪ್ಪಿದವರು, ವಿಕಲಚೇತನರೂ ಇದ್ದಾರೆ. ಇಂತಹ ನಿರ್ಗತಿಕರನ್ನು ಗುರುತಿಸಿ ಅವರಿಗೆ ಸೂಕ್ತ ಆರೈಕೆ, ಅಗತ್ಯವಿದ್ದಲ್ಲಿ ಚಿಕಿತ್ಸೆ ನೀಡಿ ಸಲಹುವ ಅಭಯ ಕೇಂದ್ರವೊAದು ಕಳೆದ ಏಳು ವರ್ಷಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ.

‘ತಣಲ್’ ಎಂದು ಕರೆಯಲ್ಪಡುವ ಈ ನೆರಳಮನೆ ಮಡಿಕೇರಿಯ ತ್ಯಾಗರಾಜನಗರದಲ್ಲಿದ್ದು, ಜೀವನದಲ್ಲಿ ಆಶ್ರಯವಿಲ್ಲದ ಮಹಿಳೆಯರನ್ನು ಮಾತ್ರ ಗುರುತಿಸಿಕೊಂಡು ಅವರಿಗೆ ಇಲ್ಲಿ ಉಚಿತ ಆಹಾರ, ವಸತಿ, ಉಡುಪು, ಅಗತ್ಯವಿದ್ದಲ್ಲಿ ಔಷಧಿ ಮುಂತಾದ ಸವಲತ್ತುಗಳನ್ನು ನೀಡುವ ಮೂಲಕ ಮನೆ ಮಂದಿಯAತೆ ನೋಡಿಕೊಳ್ಳಲಾಗುತ್ತಿದೆ. ಕೇರಳದ ವಡಗರದಲ್ಲಿ ಈ ರೀತಿಯ ಅಭಯ ಕೇಂದ್ರ ಇರುವುದನ್ನು ಕಂಡು ಪ್ರೇರಿತರಾದ ಮಡಿಕೇರಿಯ ಮಹಮ್ಮದ್‌ಮುಸ್ತಫಾ ಅವರು ಆ ಕೇಂದ್ರದ ಸಹಕಾರದೊಂದಿಗೆ ಕೆಲವು ಸಮಾನ ಮನಸ್ಕರನ್ನು ಸೇರಿಸಿಕೊಂಡು ಮಡಿಕೇರಿಯಲ್ಲಿ ಈ ಮಹತ್ತರ ಕಾರ್ಯಕ್ಕೆ ಮುಂದಾದರು. ಮಹಮ್ಮದ್ ಅವರ ಸಮಾಜ ಸೇವಾ ಮನೋಭಾವ ಕಂಡು ನಗರದ ಹಿಲ್‌ಟೌನ್ ಹೊಟೇಲ್ ಮಾಲೀಕ ಕೆ. ಪಿ. ನಾಸಿರ್ ಅವರು ಈ ಯೋಜನೆಗೆ ಬೇಕಾದ ಸ್ಥಳ ಹಾಗೂ ಕಟ್ಟಡದ ವ್ಯವಸ್ಥೆಯನ್ನು ಮಾಡಿಕೊಟ್ಟರು.

ಅಷ್ಟರಲ್ಲಿ ವಿವಿಧ ಜನಾಂಗ ಬಾಂಧವರನ್ನೊಳಗೊAಡ ಟ್ರಸ್ಟ್ ಒಂದನ್ನು ರಚಿಸಿಕೊಂಡ ಮಹಮ್ಮದ್ ಮುಸ್ತಫಾ ಅವರು ಯೋಜನೆಯ ಅನುಷ್ಠಾನಕ್ಕೆ ಇಳಿದರು. ಪರಿಣಾಮವಾಗಿ ಯಾರೂ ದಿಕ್ಕಿಲ್ಲದ, ದಿಕ್ಕಿದ್ದರೂ ಗುರುತಿಸಲಾಗದ ಅನೇಕ ನೊಂದಜೀವಗಳು ಇಂದು ತಣಲ್ ಆಶ್ರಮದಲ್ಲಿ ಆಶ್ರಯ ಪಡೆದುಕೊಂಡಿವೆ. ಇಲ್ಲಿ ಪ್ರಸ್ತುತ ಇರುವ ೩೭ ಮಹಿಳೆಯರ ಪೈಕಿ ಆರೋಗ್ಯವಂತರಿಗಿAತ ಅನಾರೋಗ್ಯ ಪೀಡಿತರೇ ಅಧಿಕ. ನೂರಾರು ಮಂದಿಗೆ ಆಶ್ರಯ ಕಲ್ಪಿಸಿರುವ ತಣಲ್ ಸಂಸ್ಥೆ ಈ ಮಹಿಳೆಯರ ಶುಶ್ರೂಷೆಗಾಗಿ ಹಲವು ಮಹಿಳಾ ಸಿಬ್ಬಂದಿಗಳನ್ನು ಕೂಡ ನೇಮಿಸಿಕೊಂಡಿದೆ.

ಬ್ರೆöÊನ್ ಟ್ಯೂಮರ್, ಕ್ಯಾನ್ಸರ್, ಗ್ಯಾಂಗ್ರಿನ್, ಪಾರ್ಶ್ವವಾಯು ಪೀಡಿತರಿಗೂ ಇಲ್ಲಿ ಆಸರೆ ಕಲ್ಪಿಸಲಾಗಿದೆ. ಇಲ್ಲಿ ಇದುವರೆಗೆ ದಾಖಲಾಗಿರುವವರ ಪೈಕಿ ಅನೇಕರ ಪೋಷಕರುಗಳನ್ನು ಪತ್ತೆ ಹಚ್ಚಿ ಹೆಚ್ಚಿನವರನ್ನು ಅವರುಗಳ ವಶಕ್ಕೆ ಒಪ್ಪಿಸಲಾಗಿದೆ.

ರೋಗಪೀಡಿತರಾಗಿ ಆಶ್ರಯದಾತರಿಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಸರಿಯಾಗಿ ನೋಡಿಕೊಳ್ಳುವ ವ್ಯವಸ್ಥೆ ಇಲ್ಲದ ರೋಗಿಗಳನ್ನು ಕೂಡ ಕರೆತಂದು ತಣಲ್ ಕೇಂದ್ರದಲ್ಲಿ ಶುಶ್ರೂಷೆ ನೀಡಲಾಗುತ್ತಿದೆ. ಇದಕ್ಕಾಗಿ ಇಬ್ಬರು ಶುಶ್ರೂಷಕಿಯರೂ ಸೇರಿದಂತೆ ಆರು ಮಂದಿ ಮಹಿಳಾ ಸಿಬ್ಬಂದಿಯನ್ನು ತಣಲ್ ಕೇಂದ್ರವು ನೇಮಿಸಿಕೊಂಡಿದೆ.

ಎದ್ದು ನಡೆಯಲು ಅಶಕ್ತರಾದ ರೋಗಿಗಳು ತಾವು ಮಲಗಿದ್ದ ಹಾಸಿಗೆಯಲ್ಲೇ ಹೇಸಿಗೆ ಮಾಡಿದಾಗ ಅದನ್ನೆಲ್ಲ ಹೇಸದೆ ಶುಚಿಗೊಳಿಸುವ ಸಿಬ್ಬಂದಿಗಳು ತಣಲ್ ಸಂಸ್ಥೆಗೆ ಹೇಳಿ ಮಾಡಿಸಿದಂತಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ತಮಿಳುನಾಡು, ಆಂಧ್ರ ಪ್ರದೇಶಗಳ ನಿರಾಶ್ರಿತ ಮಹಿಳೆಯರೂ ಇಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವು ಸಂದರ್ಭಗಳಲ್ಲಿ ಯಾರೂ ದಿಕ್ಕಿಲ್ಲದೆ ರಸ್ತೆಯಲ್ಲಿ ಅಲೆದಾಡುವ ಮಹಿಳೆಯರನ್ನು ಪೊಲೀಸರೇ ಈ ಕೇಂದ್ರಕ್ಕೆ ತಂದು ಸೇರಿಸಿದ ಉದಾಹರಣೆಗಳಿವೆ. ಅಸ್ವಸ್ಥರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಕೇಂದ್ರದಲ್ಲಿ ಆಕ್ಸಿಜನ್ ಸೌಲಭ್ಯ ಇರುವ ಸ್ಪೆಷಲ್ ಕೇರ್ ಯೂನಿಟ್ ಕೂಡ ಇದೆ. ಇಲ್ಲಿ ಅಗತ್ಯಬಿದ್ದಾಗ ವೈದ್ಯರನ್ನು ಕರೆಸಿ ಚಿಕಿತ್ಸೆಯನ್ನು ಕಲ್ಪಿಸಲಾಗುತ್ತಿದೆ.

ಯಾವುದೇ ಓರ್ವ ನಿರ್ಗತಿಕ ಮಹಿಳೆಯನ್ನು ಈ ಆಶ್ರಮಕ್ಕೆ ಸೇರಿಸಿ ಕೊಳ್ಳುವ ಮುನ್ನ ಇದರ ಮುಖ್ಯಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿಯೇ ವ್ಯವಸ್ಥೆ ಕಲ್ಪಿಸುತ್ತಾರೆ. ಅದೇ ರೀತಿ ಇಲ್ಲಿರುವ ಅಪರಿಚಿತರು ತಮ್ಮ ಊರಿನ ಹೆಸರು ಹೇಳಿದಾಗ ಅದರ ಆಧಾರದಲ್ಲಿ ತಣಲ್ ಸಂಸ್ಥೆ ಯವರು ಗೂಗಲ್ ಮೂಲಕ ಹುಡುಕಿ ಆ ಊರಿನ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಂಡು ಖಚಿತ ಪಡಿಸಿ ಕೊಳ್ಳುತ್ತಾರೆ.

ಮನೆಬಿಟ್ಟು ಒಂಭತ್ತು ವರ್ಷ ಗಳಾಗಿದ್ದ ಹರಿಯಾಣದ ರೋತಕ್ ಪ್ರದೇಶದ ದರ್ಶಿನಿ ಎಂಬ ಮಹಿಳೆ ಯನ್ನು ಆಕೆಯ ವಿಳಾಸ ಪತ್ತೆಹಚ್ಚಿ ಮನೆಗೆ ತಲುಪಿಸಿದ ತಣಲ್‌ನ ಮುಖ್ಯಸ್ಥರು, ಉತ್ತರ ಪ್ರದೇಶದ ಮುಕ್ಕು ಎಂಬ ಮಹಿಳೆಯನ್ನು ಅವರ ಮಗನ ಕೈಗೆ ಒಪ್ಪಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಹಾಗೆಯೇ ಮನೆ ಬಿಟ್ಟು ಏಳು ವರ್ಷಗಳಾಗಿದ್ದ ಮುತ್ತುಲಕ್ಷಿö್ಮ ಎಂಬ ಮಹಿಳೆಯ ಕಾಲಿನ ಮಂಡಿಯ ತನಕ ಕೊಳೆತ ಸ್ಥಿತಿಯಲ್ಲಿದ್ದು, ಅದನ್ನು ಗುಣಪಡಿಸಿ ಆ ಮಹಿಳೆಯನ್ನು ಆಕೆಯ ಕುಟುಂಬಕ್ಕೆ ಒಪ್ಪಿಸಿದ ಸಂತೃಪ್ತಿ ತಣಲ್ ಸಂಸ್ಥೆಯದು.

ಈ ಅನಾಥಾಶ್ರಮದ ನಿರಾಶ್ರಿತ ಮಹಿಳೆಯರಿಗೆ ಸಂಸ್ಥೆಯ ವತಿಯಿಂದ ನಿತ್ಯ ಸ್ನಾನ, ಸಮಯಕ್ಕೆ ಸರಿಯಾಗಿ ಬಿಸಿಊಟ, ಟೀ, ಕಾಫಿ, ಹಣ್ಣು ಹಂಪಲು, ಅಗತ್ಯ ಇರುವವರಿಗೆ ಔಷಧಿ ಮುಂತಾದವುಗಳನ್ನು ಕಲ್ಪಿಸಿ ಕೊಡುವ ಮೂಲಕ ಸಾಂತ್ವನದ ನುಡಿಯಾಡಿ ಪ್ರೀತಿಯಿಂದ ಮನೆ ಮಂದಿಯAತೆ ನೋಡಿಕೊಳ್ಳಲಾಗುತ್ತಿದೆ.

ಈ ವೃದ್ಧಾಶ್ರಮದಲ್ಲಿರುವ ವಯೋವೃದ್ಧರು ನಿಧನ ಹೊಂದಿದಾಗ ಆಯಾ ಜನಾಂಗದ ಪದ್ಧತಿ ಪ್ರಕಾರವೇ ಅಂತ್ಯಸAಸ್ಕಾರ ನಡೆಸುವ ಕಾರ್ಯವನ್ನು ಆಯಾ ಧರ್ಮ ಗುರುಗಳು ಹಾಗೂ ಸಂಘ-ಸAಸ್ಥೆಗಳ ಪ್ರತಿನಿಧಿಗಳ ಸಹಕಾರದೊಂದಿಗೆ ಸಂಸ್ಥೆಯವರೇ ಮಾಡುತ್ತಾರೆ.

ಹೊತ್ತು ಹೆತ್ತು ಸಾಕಿ ಸಲಹಿದ ಮಾತೆಯರನ್ನು ಬೀದಿಪಾಲು ಮಾಡದೆ, ಅನಾಥಾಶ್ರಮಕ್ಕೆ ಸೇರಿಸದೆ, ಕೊನೆ ಉಸಿರಿರುವ ತನಕ ನೋಡಿಕೊಳ್ಳುವಂತಾಗ ಬೇಕು ಎಂಬುದರ ಕುರಿತು ಅಭಿಯಾನವನ್ನು ಕೂಡ ತಣಲ್ ಸಂಸ್ಥೆ ಕೈಗೊಳ್ಳುತ್ತಾ ಬರುತ್ತಿದೆ.

ಸಿದ್ದಾಪುರದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ

ತಣಲ್‌ನ ವತಿಯಿಂದ ಮಧುಮೇಹ ರೋಗಿಗಳಿಗೆ ಅನುಕೂಲವಾಗು ವಂತೆ ಸಿದ್ದಾಪುರದಲ್ಲಿ ಒಂದು ಉಚಿತ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗಿದ್ದು, ಅಶ್ರಫ್ ಎಂಬವರ ಮೇಲ್ನೋಟದಲ್ಲಿ ಇದು ಕಾರ್ಯಾಚರಿಸುತ್ತಾ ಬರುತ್ತಿದೆ.

ಇಷ್ಟೆಲ್ಲಾ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ತಣಲ್ ಸಂಸ್ಥೆಗೆ ಹೇಳಿಕೊಳ್ಳುವ ಯಾವುದೇ ವರಮಾನ ಇಲ್ಲ. ಪ್ರತಿ ತಿಂಗಳು ಇಲ್ಲಿನ ಖರ್ಚು ವೆಚ್ಚಕ್ಕಾಗಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳ ಅಗತ್ಯವಿದ್ದು, ಸ್ವಲ್ಪ ಮಟ್ಟಿಗೆ ಸಂಸ್ಥೆಯ ಟ್ರಸ್ಟಿಗಳು ಪ್ರತಿ ಮಾಸ ನೆರವಾಗುತ್ತಿದ್ದಾರೆ, ಉಳಿದ ಮೊತ್ತಕ್ಕೆ ಸಮಾಜದ ಸಹೃದಯಿ ಕೊಡುಗೈ ದಾನಿಗಳನ್ನು ಆಶ್ರಯಿಸಲಾಗುತ್ತಿದೆ ಎಂದು ಮಹಮ್ಮದ್ ಮುಸ್ತಫಾ ಹೇಳುತ್ತಾರೆ. ಪ್ರಸ್ತುತ ಕೊಡಗು ಜಿಲ್ಲೆ ಸೇರಿದಂತೆ ಆಂಧ್ರ, ಅಸ್ಸಾಂ, ತಮಿಳುನಾಡು ಪ್ರದೇಶಗಳ ೩೭ ಮಹಿಳೆಯರು ತಣಲ್‌ನಲ್ಲಿದ್ದಾರೆ.

ಆಹಾರ ಸಾಮಗ್ರಿ, ಅಡುಗೆ ಅನಿಲಗಳ ಬೆಲೆ ಏರುತ್ತಲೇ ಹೋಗುತ್ತಿದ್ದು, ಯಾವುದೇ ಸ್ಥಿರ ಆದಾಯ ಮಾರ್ಗವಿಲ್ಲದ ಈ ಸಂಸ್ಥೆಗೆ ಸರ್ಕಾರದ ಅನುದಾನದ ಅಗತ್ಯವಿದೆ. ಜಿಲ್ಲೆಯ ಜನಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಗಣ್ಯ ವ್ಯಕ್ತಿಗಳು ಜನಪರ ಕಾಳಜಿ ಉಳ್ಳವರು ಒಮ್ಮೆ ಈ ತಣಲ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಕೈಜೋಡಿಸಿದಲ್ಲಿ ಮತ್ತಷ್ಟು ಮಂದಿಗೆ ಪ್ರಯೋಜನವಾಗಲಿದೆ.

ತಣಲ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಮುಸ್ತಫಾ ಅವರ ಸಂಪರ್ಕ ಸಂಖ್ಯೆ ೯೮೪೪೫೫೮೮೯೬

-ಅಬ್ದುಲ್ಲ ಮಡಿಕೇರಿ

ಮೊ: ೯೮೪೪೦೬೬೫೮೨