ಮೂರ್ನಾಡು, ಮಾ. ೨೫: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಗ್ಗಾಲು ಗ್ರಾಮದ ಪುದಿಯೊಕ್ಕಡ ಕುಟುಂಬಸ್ಥರ ಐನ್‌ಮನೆ ರಸ್ತೆಗೆ ಶಾಸಕರ ಅನುದಾನದಿಂದ ರೂ. ೪ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದರು. ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪುದಿಯೊಕ್ಕಡ ಕುಟುಂಬಸ್ಥರು ಹಾಜರಿದ್ದರು.