ಕುಶಾಲನಗರ, ಮಾ. ೨೫: ಬಿಜೆಪಿ ಪಕ್ಷದ ಸೋಮವಾರಪೇಟೆ ಮಂಡಲದ ಎಸ್.ಟಿ. ಮೋರ್ಚಾ ಸಮಾವೇಶ ಕುಶಾಲನಗರದಲ್ಲಿ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಸಮಾವೇಶಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ತುಳಿತಕ್ಕೆ ಒಳಗಾದ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ. ರಾಜ್ಯದಲ್ಲಿ ಯಡಿ ಯೂರಪ್ಪ ಅವರು ಮುಖ್ಯಮಂತ್ರಿ ಗಳಾಗಿದ್ದ ಅವಧಿಯಲ್ಲಿ ಎಸ್‌ಸಿ-ಎಸ್ಟಿ ಕಾಲನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ರಸ್ತೆಗಳನ್ನು ಸಂಪೂರ್ಣ ಕಾಂಕ್ರೀಟಿ ಕರಣಗೊಳಿಸಲಾಯಿತು ಎಂದರು. ಸಮುದಾಯದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಬಿಜೆಪಿ ಪಕ್ಷದಿಂದ ಮಾಡಲಾಗುತ್ತಿದೆ ಎಂದರು. ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಮಿಟ್ಟು ರಂಜಿತ್ ಮಾತನಾಡಿ, ಆದಿವಾಸಿ ಸಮು ದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಲು ಶಾಸಕರು ಕ್ರಮವಹಿಸ ಬೇಕಿದೆ ಎಂದು ಆಗ್ರಹಿಸಿದರು. ಎಸ್.ಟಿ. ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜನಪರ ಆಡಳಿತದ ಕಾರಣಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಹೊರತು ಯಾವುದೇ ಆಮಿಷಕ್ಕೆ ಒಳಗಾಗಿ ಅಲ್ಲ ಎಂದರು.

ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ದ.ಕ. ಪ್ರಬಾರಿ ಬಿ.ಬಿ. ಭಾರತೀಶ್, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಎಸ್.ಟಿ. ಘಟಕದ ರಾಜ್ಯ ಕಾರ್ಯದರ್ಶಿ ಮಂಜುಳಾ, ಬಿ.ಕೆ. ಮೋಹನ್, ಎಸ್.ಟಿ. ಮೋರ್ಚಾ ತಾಲೂಕು ಅಧ್ಯಕ್ಷ ರವಿ, ನಗರ ಘಟಕ ಅಧ್ಯಕ್ಷ ಚಂದ್ರಶೇಖರ್, ಕುಶಾಲನಗರ ಪುರಸಭೆ ಅಧ್ಯಕ್ಷ ಬಿ. ಜೈವರ್ಧನ್, ಕೂಡುಮಂಗಳೂರು ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ. ಚಂದ್ರ, ಬ್ಯಾಡಗೊಟ್ಟ ಹಾಡಿ ಮುಖಂಡ ಸಿದ್ದು, ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯೆ ಉಮಾ, ಸಮಾ ವೇಶದಲ್ಲಿ ಎಸ್.ಟಿ. ಮುಖಂಡರು ಗಳಿಗೆ, ಎಸ್.ಟಿ. ಸಮುದಾಯದ ಗ್ರಾ.ಪಂ. ಜನಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಮುನ್ನ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಭಾಂಗಣ ತನಕ ಮೆರವಣಿಗೆ ತೆರಳಿದರು.