ಶನಿವಾರಸಂತೆ, ಮಾ. ೨೫: ಶ್ರೀ ರಾಮನವಮಿ ಅಂಗವಾಗಿ ಶ್ರೀ ರಾಮ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾ.೨೭ರಂದು ಬೆಳಿಗ್ಗೆ ೮.೩೦ ರಿಂದ ಮೂಲ ಸನ್ನಿಧಾನದಲ್ಲಿ ಪಂಚಾಮೃತ ಸಹಿತ ಮಹಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ ೬ ಗಂಟೆಗೆ ಗಂಧದ ಅಲಂಕಾರ, ೭ ಗಂಟೆಗೆ ಶೋಡಷೋಪಚಾರ ಪೂಜೆ, ಅರ್ಚನೆ, ಅಷ್ಠಾವಧಾನ ಸೇವೆ, ೮ ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ.

ತಾ. ೨೮ ರಂದು ೮.೩೦ ರಿಂದ ಪಂಚಾಮೃತ ಸಹಿತ ಮಹಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ ೬ ಗಂಟೆಗೆ ಅಕ್ಷತೆಯ ಅಲಂಕಾರ, ೭ ಗಂಟೆಗೆ ಶ್ರೀ ವಿಷ್ಣು ಸಹಸ್ರನಾಮಾರ್ಚನೆ, ೮ ಗಂಟೆಗೆ ಅಷ್ಟಾವಧಾನ ಸೇವೆ ನಂತರ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೨೯ ರಂದು ಪಂಚಾಮೃತ ಸಹಿತ ಮಹಾಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ, ಸಂಜೆ ೬ ಗಂಟೆಗೆ ಕಾಯಿತುರಿ ಅಲಂಕಾರ ಸಂಜೆ ೭ ಗಂಟೆಗೆ ಶತಶ್ಲೋಕೀ ರಾಮಾಯಣ, ಪಾರಾಯಣ, ೮ ಗಂಟೆಗೆ ಅಷ್ಠಾವಧಾನ ಸಹಿತ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ.

ತಾ. ೩೦ ರಂದು ಬೆಳಿಗ್ಗೆ ಮೂಲ ಸನ್ನಿಧಾನದಲ್ಲಿ ಪಂಚಾಮೃತ ಸಹಿತ ವಿಷ್ಣುಸೂಕ್ತ, ಶ್ರೀಸೂಕ್ತ, ಪುರುಷ ಸೂಕ್ತ, ಅಭಿಷೇಕ, ಅಲಂಕಾರ, ೧೦ ಗಂಟೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ಋತ್ವಿಕ್ ವರ್ಣ, ಕಲಶಾರಾಧನೆ ಹಾಗೂ ರಾಮತಾರಕ ಹೋಮ, ಮಧ್ಯಾಹ್ನ ೧೨.೩೦ ಕ್ಕೆ ಮಹಾಮಂಗಳಾರತಿ, ೧ ಗಂಟೆಗೆ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಬಳಿಕ ೩.೩೦ ಗಂಟೆಗೆ ಸೀತಾಲಕ್ಷö್ಮಣ, ಆಂಜನೇಯ ಸಹಿತ ಶ್ರೀಪಟ್ಟಾಭಿರಾಮರ ಉತ್ಸವ ಮೂರ್ತಿಗಳನ್ನು ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿಯ ಮೂಲಕ ಮೆರವಣಿಗೆ ಮಾಡಲಾಗುವುದು. ಉತ್ಸವ ಮೂರ್ತಿಗಳು ದೇವಾಲಯ ತಲುಪಿದ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀರಾಮ ಮಂದಿರ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.